ಸರ್ಕಲ್‌ ಬಳಿ ಗಲಾಟೆ ಮಾಡುತ್ತಿದ್ದ ಇಬ್ಬರಿಗೆ ಮೆಡಿಕಲ್‌ ಟೆಸ್ಟ್‌, ಬಳಿಕ ಒಬ್ಬ ಅರೆಸ್ಟ್‌, ಏನಿದು ಕೇಸ್‌?

ಸಾಗರ: ಸಾರ್ವಜನಿಕ ಸ್ಥಳದಲ್ಲಿ ಗಲಾಟೆ (Public nuisance) ಮಾಡುತ್ತಿದ್ದ ಇಬ್ಬರನ್ನು ವಶಕ್ಕೆ ಪಡೆದ ಪೊಲೀಸರು ಅನುಮಾನದ ಮೇರೆಗೆ ವೈದ್ಯಕೀಯ ಪರೀಕ್ಷೆಗೆ (Medical examination) ಒಳಪಡಿಸಿದ್ದಾರೆ. ಈ ವೇಳೆ ಒಬ್ಬ ಯುವಕ ಮಾದಕ ವಸ್ತು (Narcotics) ಸೇವನೆ ಮಾಡಿರುವುದು ದೃಢವಾಗಿದೆ.

ಸಾಗರ ನಗರದ ಜೆ.ಸಿ. ಸರ್ಕಲ್ ಹತ್ತಿರ ಇಬ್ಬರು ಯುವಕರು ಜೋರಾಗಿ ಮಾತನಾಡುತ್ತಾ ಅಸಹಜವಾಗಿ ವರ್ತಿಸುತ್ತಿದ್ದರು. ಸ್ಥಳಕ್ಕೆ ತೆರಳಿದ ಪೊಲೀಸರು ಇಬ್ಬರನ್ನು ವಿಚಾರಣೆ ನಡೆಸಿದ್ದಾರೆ. ಬಳಿಕ ಅನುಮಾನದ ಮೇರೆಗೆ ಇಬ್ಬರನ್ನೂ ವಶಕ್ಕೆ ಪಡೆದ ಪೊಲೀಸರು ವೈದ್ಯಕೀಯ ಪರೀಕ್ಷೆಗಾಗಿ ಸಾಗರ ಸರ್ಕಾರಿ ಆಸ್ಪತ್ರೆಗೆ (Government Hospital) ಕರೆದೊಯ್ದಿದ್ದಾರೆ.

Sagara-City-Police-Station

ಪರೀಕ್ಷೆಯ ವೇಳೆ ಒಬ್ಬ ಯುವಕ ಗಾಂಜಾ ಸೇವಿಸಿರುವುದು ದೃಢಪಟ್ಟಿದೆ. ಈ ಹಿನ್ನೆಲೆ ಸಾಹಿಲ್ ಖಾನ್ (24) ಎಂಬಾತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಸಾಗರ ನಗರ ಪೊಲೀಸ್ ಠಾಣೆಯಲ್ಲಿ (Police Station) ಪ್ರಕರಣ ದಾಖಲಾಗಿದೆ (Case registered).

ಚಿತ್ರದ ವಿವರಣೆ
Shaki Toyota, Shivamogga
ನಿತಿನ್ ಆರ್‌.ಕೈದೊಟ್ಲು
ನಿತಿನ್ ಆರ್‌.ಕೈದೊಟ್ಲು

Published : May 11, 2026 at 7:00 AM IST

JNN College of Engineering Admissions started

© ಶಿವಮೊಗ್ಗ ಲೈವ್‌ : ಮೇ 11, 2026