ಸಾಗರ: ರಸ್ತೆ ಬದಿ ನಿಲ್ಲಿಸಿದ್ದ ಕಾರಿಗೆ ಪಿಕ್ ಅಪ್ ವಾಹನ (Pick-up vehicle) ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಕಾರಿನ ಹೆಡ್ ಲೈಟ್ (Headlight) ಒಡೆದಿದೆ. ಒಂದು ಬದಿ ಹಾನಿಯಾಗಿದೆ (Damaged). ಸಾಗರ ತಾಲೂಕಿನ ಭೀಮೇಶ್ವರ ಸಮೀಪ ಘಟನೆ ನಡೆದಿದೆ.
ನಾಗವಳ್ಳಿ ಗ್ರಾಮದ ಮಂಜುನಾಥ್ ಮಹದೇವ ನಾಯ್ಕ ಎಂಬುವವರು ಸ್ನೇಹಿತರ ಜೊತೆಗೆ ಕಾರಿನಲ್ಲಿ ಸಾಗರಕ್ಕೆ ಹೋಗಿ ಹಿಂತಿರುಗುತ್ತಿದ್ದರು. ಭೀಮೇಶ್ವರ ಹತ್ತಿರ ಮೆಸ್ಕಾಂ (MESCOM) ಇಲಾಖೆಯವರು ಜಂಗಲ್ ಕಟ್ಟಿಂಗ್ (Jungle cutting) ಮಾಡುತ್ತಿದ್ದರು. ಆದ್ದರಿಂದ ಮಂಜುನಾಥ್ ಅವರು ತಮ್ಮ ಕಾರನ್ನು ರಸ್ತೆಯ ಎಡಬದಿಯಲ್ಲಿ ನಿಲ್ಲಿಸಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.

ಈ ವೇಳೆ ಅಲ್ಲೇ ನಿಂತಿದ್ದ ಪಿಕ್ ಅಪ್ ವಾಹನದ ಚಾಲಕ ತನ್ನ ವಾಹನವನ್ನು ಏಕಾಏಕಿ ಮುಂದಕ್ಕೆ ಚಲಾಯಿಸಿದ್ದಾರೆ. ಕಾರಿನ ಎಡಭಾಗಕ್ಕೆ ಡಿಕ್ಕಿ ಹೊಡೆಸಿದ್ದಾರೆ. ಘಟನೆಯಲ್ಲಿ ಕಾರಿನ ಎಡಭಾಗದ ಹೆಡ್‌ಲೈಟ್ ಹಾಗೂ ಬಾಡಿ ಜಖಂಗೊಂಡಿದೆ (Body damage) ಎಂದು ಆರೋಪಿಸಲಾಗಿದೆ. ಕಾರ್ಗಲ್ ಪೊಲೀಸ್ ಠಾಣೆಯಲ್ಲಿ (Kargal Police Station) ಪ್ರಕರಣ ದಾಖಲಾಗಿದೆ.
