ಯುವತಿಯರೆ ಎಚ್ಚರ, ಪ್ರಿಯಕರನಿಗೆ ಕಳುಹಿಸಿದ್ದ ಖಾಸಗಿ ಫೋಟೊ ಇನ್‌ಸ್ಟಾಗ್ರಾಂನಲ್ಲಿ ಪ್ರತ್ಯಕ್ಷ

ಶಿವಮೊಗ್ಗ: ಪರಿಚಯದ ಯುವಕನೊಬ್ಬ ಯುವತಿಯ ಹೆಸರಿನಲ್ಲಿ ನಕಲಿ ಇನ್‌ಸ್ಟಾಗ್ರಾಮ್ ಖಾತೆಗಳನ್ನು (Fake Instagram accounts) ಸೃಷ್ಟಿಸಿದ್ದಾರೆ. ಆಕೆಯ ಖಾಸಗಿ ಫೋಟೋ ಮತ್ತು ವಿಡಿಯೋಗಳನ್ನು ಅಪ್‌ಲೋಡ್ ಮಾಡಿ ಮಾನಹಾನಿ (Defamation) ಮಾಡುತ್ತಿರುವ ಘಟನೆ ವರದಿಯಾಗಿದೆ. ➤ ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ.

ಸಲುಗೆ, ಪ್ರೀತಿ, ವಿಡಿಯೋ, ಫೋಟೊ

ಸಂತ್ರಸ್ತ ಯುವತಿ ಹಾಗೂ ಆರೋಪಿತ ಯುವಕ ಕೆಲವು ವರ್ಷಗಳಿಂದ ಸ್ನೇಹಿತರಾಗಿದ್ದರು. ಸ್ನೇಹದ ಸಲುಗೆಯಿಂದ ಆರೋಪಿತನು ಪ್ರೀತಿಸುವುದಾಗಿ ನಂಬಿಸಿ, ಯುವತಿಯನ್ನು ಪುಸಲಾಯಿಸಿ ವೀಡಿಯೋ ಕರೆ (Video call) ಮಾಡುವಂತೆ ಹಾಗೂ ಫೋಟೋಗಳನ್ನು ಕಳುಹಿಸುವಂತೆ ಹೇಳಿದ್ದನು. ಇದನ್ನು ನಂಬಿದ ಯುವತಿಯು ತನ್ನ ಖಾಸಗಿ ಫೋಟೋ ಹಾಗೂ ವಿಡಿಯೋಗಳನ್ನು ಆತನ ವಾಟ್ಸಾಪ್‌ಗೆ (WhatsApp) ಕಳುಹಿಸಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.

instagram.webp

ನಕಲಿ ಇನ್‌ಸ್ಟಾಗ್ರಾಂ ಖಾತೆಗಳು

ಇತ್ತೀಚಿಗೆ ಯುವತಿಯು ಆತನೊಂದಿಗೆ ಸಲುಗೆ ಕಡಿಮೆ ಮಾಡಿದ್ದರಿಂದ ಕೆರಳಿದ ಆರೋಪಿತನು ಯುವತಿಗೆ ಕಿರುಕುಳ (Harassment) ನೀಡಲು ಆರಂಭಿಸಿದ್ದಾನೆ. ಅಲ್ಲದೆ ಆತನು ವಿವಿಧ ಹೆಸರಿನ ನಕಲಿ ಇನ್‌ಸ್ಟಾಗ್ರಾಮ್ ಖಾತೆಗಳನ್ನು ಸೃಷ್ಟಿಸಿದ್ದಾನೆ. ಆ ಖಾತೆಗಳಲ್ಲಿ ಯುವತಿಯ ಫೋಟೋಗಳು, ವಿಡಿಯೋಗಳು ಮತ್ತು ಆಕೆಯ ಮೊಬೈಲ್ ಸಂಖ್ಯೆಯನ್ನು ಅಪ್‌ಲೋಡ್ ಮಾಡಿ ಮಾನಹಾನಿ ಮಾಡುವುದಾಗಿ ಬೆದರಿಕೆ (Threat) ಹಾಕಿದ್ದಾನೆ ಎಂದು ಆರೋಪಿಸಲಾಗಿದೆ. ಘಟನೆ ಸಂಬಂಧ ಶಿವಮೊಗ್ಗ ಸೈಬರ್‌ ಕ್ರೈಮ್‌ (Cyber Crime) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಯುವತಿಯರೆ ಎಚ್ಚರ ವಹಿಸಿ

ಸಾಮಾಜಿಕ ಜಾಲತಾಣಗಳಲ್ಲಿ (Social media) ಖಾಸಗಿ ಫೋಟೊಗಳನ್ನು ಹಂಚಿಕೊಳ್ಳುವುದು ಅಪರಾಧ. ಯುವತಿಯರು ಪರಿಚಯಸ್ಥರಿರಲಿ ಅಥವಾ ಸ್ನೇಹಿತರಿರಲಿ, ಯಾರಿಗೂ ಖಾಸಗಿ ಫೋಟೋ ಹಾಗೂ ವಿಡಿಯೋಗಳನ್ನು ಹಂಚಿಕೊಳ್ಳುವಾಗ ಎಚ್ಚರಿಕೆ ವಹಿಸುವುದು ಅಗತ್ಯ. ಸಣ್ಣ ಅಜಾಗರೂಕತೆಯೂ ನಿಮ್ಮ ಘನತೆಗೆ ಕುಂದು ತರಬಹುದು.

📍 ನಿಮ್ಮೂರ ಸುದ್ದಿ
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ.
ಮುಂದಿನ ಸುದ್ದಿ ಓದಿ TRENDING

ಕೊಡಚಾದ್ರಿ ಟ್ರೆಕ್ಕಿಂಗ್‌: ಹೃದಯಾಘಾತದಿಂದ ಸಿನಿಮಾ ನಿರ್ಮಾಪಕನ ಪುತ್ರ ಸಾವು