ಭದ್ರಾವತಿ: ತಾಲೂಕಿನ ಸಿರಿಯೂರು (Siriyur) ರಸ್ತೆಯ ಮಾಚೇನಹಳ್ಳಿ (Machenahalli) ಕೈಗಾರಿಕಾ ಪ್ರದೇಶದಲ್ಲಿರುವ ಕಾಂಕ್ರೀಟ್ ಉದ್ದಿಮೆಯೊಂದರ ಮೇಲೆ ಕಾರ್ಮಿಕ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ, ಕೆಲಸಕ್ಕೆ ನೇಮಿಸಿಕೊಂಡಿದ್ದ ಕಿಶೋರ ಕಾರ್ಮಿಕನನ್ನು (Adolescent Labour) ರಕ್ಷಿಸಿದ್ದಾರೆ.
ಕಾರ್ಮಿಕ ನಿರೀಕ್ಷಕಿ ಸುಪ್ರಿತಾ ಜೆ.ವಿ. ಅವರು ನೀಡಿದ ದೂರಿನನ್ವಯ ಈ ಕ್ರಮ ಕೈಗೊಳ್ಳಲಾಗಿದೆ. ಮಾಚೇನಹಳ್ಳಿಯ ಕೈಗಾರಿಕಾ ಘಟಕದಲ್ಲಿ ಬಿಹಾರ ಮೂಲದ 16 ವರ್ಷ 7 ತಿಂಗಳ ಪ್ರಾಯದ ಬಾಲಕನೊಬ್ಬ ಕಳೆದ ಐದು ತಿಂಗಳಿಂದ ಹೆಲ್ಪರ್ (Helper) ಆಗಿ ಕೆಲಸ ಮಾಡುತ್ತಿರುವುದು ಜಿಲ್ಲಾ ಮಕ್ಕಳ ಸಮಿತಿಯ (District Child Welfare Committee) ಮಾಹಿತಿ ಲಭಿಸಿತ್ತು. ಬಂದಿತ್ತು. ಇದರ ಬೆನ್ನಿಗೆ ಕಾರ್ಮಿಕ ಇಲಾಖೆಯ ಯೋಜನಾ ನಿರ್ದೇಶಕರು ಬಾಲಕನನ್ನು ರಕ್ಷಿಸಿ, ಬಾಲಮಂದಿರಕ್ಕೆ (Remand Home) ಹಸ್ತಾಂತರಿಸಲಾಗಿದೆ.

ಅಪಾಯಕಾರಿ ಉದ್ದಿಮೆಗಳ (Hazardous Industry) ವ್ಯಾಪ್ತಿಗೆ ಬರುವ ಇಂತಹ ಘಟಕಗಳಲ್ಲಿ 18 ವರ್ಷದೊಳಗಿನ ಕಿಶೋರ ಕಾರ್ಮಿಕರನ್ನು ಕೆಲಸಕ್ಕೆ ನೇಮಿಸಿಕೊಳ್ಳುವುದು ಕಾನೂನುಬಾಹಿರ. ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯಿದೆ ಅಡಿ ನಿಯಮ ಉಲ್ಲಂಘಿಸಿರುವ ಉದ್ದಿಮೆಯ ಮಾಲೀಕನ ವಿರುದ್ಧ ಭದ್ರಾವತಿ ಗ್ರಾಮಾಂತರ (Bhadravathi Rural) ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣ (Criminal Case) ದಾಖಲಾಗಿದೆ.
