ಸೊರಬ: ಚಿಕ್ಕಚೌಟಿ ಗ್ರಾಮದಲ್ಲಿ ನಡೆದ ಹೋರಿ ಹಬ್ಬ ನೋಡಲು ಬಂದಿದ್ದ ವ್ಯಕ್ತಿಯೊಬ್ಬರ ಎಲೆಕ್ಟ್ರಿಕ್ ಬೈಕ್ (Electric Bike) ಕಳ್ಳತನವಾಗಿದೆ (Theft). ಈ ಸಂಬಂಧ ಬೈಕ್ ಮಾಲೀಕ ಮೂರುವರೆ ತಿಂಗಳ ಬಳಿಕ ದೂರು ನೀಡಿದ್ದಾರೆ.
ಅನಿಲ್.ಜೆ ಎಂಬುವವರಿಗೆ ಸೇರಿದ ಬೈಕ್ ಕಳುವಾಗಿದೆ. ಫೆ.17ರಂದು ಚಿಕ್ಕಚೌಟಿ ಗ್ರಾಮದ ಹೋರಿ ಹಬ್ಬ ವೀಕ್ಷಿಸಲು ತಮ್ಮ ಎಲೆಕ್ಟ್ರಿಕ್ ಬೈಕ್‌ನಲ್ಲಿ ಹೋಗಿದ್ದರು. ಕಾರ್ಯಕ್ರಮ ಮುಗಿಸಿ ಮಧ್ಯಾಹ್ನ ವಾಪಸ್ ಬಂದು ನೋಡಿದಾಗ ಬೈಕ್ ನಾಪತ್ತೆಯಾಗಿತ್ತು. ಕಳ್ಳರು (Unknown Accused) ಬೈಕ್ ಕಳವು ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಫೆಬ್ರವರಿ ತಿಂಗಳಲ್ಲಿ ನಡೆದ ಈ ಘಟನೆಗೆ ಸಂಬಂಧಿಸಿದಂತೆ ಮೇ 4 ರಂದು ದೂರು ದಾಖಲಿಸಲಾಗಿದೆ. ಬೈಕ್ ಕಾಣೆಯಾದ ನಂತರ ಮಾಲೀಕರು ಎಲ್ಲಾ ಕಡೆಗಳಲ್ಲಿ ಹುಡುಕಿದರು. ಎಲ್ಲಿಯು ಸಿಗದ ಹಿನ್ನೆಲೆ ಆನವಟ್ಟಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
