ಶಿವಮೊಗ್ಗ: ಜಿಲ್ಲೆಗೆ ಮತ್ತೊಂದು ರೈಲ್ವೆ ಸೇವೆ (Railway service) ನಿರಂತರವಾಗಿ ದೊರೆಯುತ್ತಿದೆ. ಇಷ್ಟು ದಿನ ವಾರಾಂತ್ಯದಲ್ಲಿ ತಾತ್ಕಾಲಿಕವಾಗಿ ಸಂಚರಿಸುತ್ತಿದ್ದ ಯಶವಂತಪುರ – ತಾಳಗುಪ್ಪ ವೀಕ್ಲಿ ಎಕ್ಸ್‌ಪ್ರೆಸ್ ರೈಲು (Weekly Express Train) ಮೇ 15ರಿಂದ ಶಾಶ್ವತ ಸೇವೆಯಾಗಿ (Permanent service) ಬದಲಾಗಲಿದೆ. ಪ್ರತಿ ಶುಕ್ರವಾರ ಯಶವಂತಪುರದಿಂದ, ಶನಿವಾರ ತಾಳಗುಪ್ಪದಿಂದ ಪ್ರಯಾಣ ಆರಂಭಿಸಲಿದೆ ಎಂದು ಲೋಕಸಭಾ ಸದಸ್ಯ ಬಿ.ವೈ. ರಾಘವೇಂದ್ರ ತಿಳಿಸಿದ್ದಾರೆ.
ಮೇ 15ರ ರಾತ್ರಿ 10:20ಕ್ಕೆ ಯಶವಂತಪುರದಿಂದ ಹೊರಡುವ ರೈಲು ಮರುದಿನ ಬೆಳಗ್ಗೆ 5:30ಕ್ಕೆ ತಾಳಗುಪ್ಪ ತಲುಪಲಿದೆ. ಮೇ 16ರ ರಾತ್ರಿ 10:30ಕ್ಕೆ ತಾಳಗುಪ್ಪದಿಂದ ಹೊರಡುವ ರೈಲು ರಾತ್ರಿ 11:50ಕ್ಕೆ ಶಿವಮೊಗ್ಗ ನಿಲ್ದಾಣಕ್ಕೆ ಆಗಮಿಸಲಿದೆ. ಮರುದಿನ ಬೆಳಗ್ಗೆ 5:15ಕ್ಕೆ ಯಶವಂತಪುರ ತಲುಪಲಿದೆ ಎಂದಿದ್ದಾರೆ.

