ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಮಳೆ, ತುಸು ತಂಪಾದ ಇಳೆ, ಕಡಿಮೆಯಾಗದ ಧಗೆ

ಶಿವಮೊಗ್ಗ: ಜಿಲ್ಲೆಯ ವಿವಿಧೆಡೆ ಇಂದು ಸಂಜೆ ವೇಳೆಗೆ ಮಳೆಯಾಗಿದೆ (Rainfall). ಶಿವಮೊಗ್ಗ ನಗರದಲ್ಲಿ ಸಾಧಾರಣ ಮಳೆಯಾಗಿದ್ದು, ಹಲವೆಡೆ ವಾತಾವರಣ ತುಸು ತಂಪಾಗಿದೆ.

​ಶಿವಮೊಗ್ಗ ಜಿಲ್ಲೆಯ ಹಲವೆಡೆ ಸಂಜೆ ವೇಳೆಗೆ ಜೋರು ಮಳೆಯಾಗಿದೆ. ತೀರ್ಥಹಳ್ಳಿ, ಹೊಸನಗರ, ಸಾಗರದ ವಿವಿಧೆಡೆ ವರ್ಷಧಾರೆಯಾಗಿದ್ದು, ಜನಜೀವನಕ್ಕೆ ತಂಪೆರೆದಿದೆ. ವಿಶೇಷವಾಗಿ ತೀರ್ಥಹಳ್ಳಿಯಲ್ಲಿ ಭಾರಿ ಮಳೆಯಾದ (Heavy rain) ವರದಿಯಾಗಿದೆ.

Rainfall-in-Shimoga-city

​ಶಿವಮೊಗ್ಗ ನಗರದಲ್ಲಿಯೂ ಸಂಜೆ ಮಳೆಯಾಯಿತು. ದಟ್ಟ ಮೋಡ ಆವರಿಸಿದ್ದರಿಂದ (Overcast sky) ಜೋರು ಮಳೆಯ ನಿರೀಕ್ಷೆ ಇತ್ತು, ಆದರೆ ಸಾಧಾರಣ ಮಳೆಯಾಗಿದೆ. ಗಾಳಿ ಮತ್ತು ಮಳೆಯ ಕಾರಣ ಹೊರಗಿನ ವಾತಾವರಣ ತಂಪಾಗಿದ್ದರೂ, ಕಟ್ಟಡಗಳು ಹಾಗೂ ಮನೆಗಳ ಒಳಗೆ ಸೆಕೆ ಅಥವಾ ಧಗೆ (Humidity) ಮುಂದುವರಿದಿದೆ.

ಹೆಚ್ಚಿನ Shimoga News, Shivamogga News ಮತ್ತು SHIVAMOGGA CITY ಸುದ್ದಿಗಳಿಗಾಗಿ ಶಿವಮೊಗ್ಗ ಲೈವ್ ನೋಡಿ.

© ಶಿವಮೊಗ್ಗ ಲೈವ್‌ : ಮೇ 14, 2026