ಶಿವಮೊಗ್ಗ: ಟ್ರಾಕ್ಟರ್, ಕಾರು ಮತ್ತು ಬಸ್ಸಿನ ಮಧ್ಯೆ ಸರಣಿ ಅಪಘಾತ (Serial accident) ಸಂಭವಿಸಿದೆ. ಘಟನೆಯ ತೀವ್ರತೆಗೆ ಟ್ರಾಕ್ಟರ್ ಎರಡು ಭಾಗವಾಗಿದೆ.
ಶಿವಮೊಗ್ಗ ತಾಲೂಕು ಕೆಳಗಿನ ಕುಂಚೇನಹಳ್ಳಿಯಲ್ಲಿ ಇಂದು ರಾತ್ರಿ ಈ ಘಟನೆ ಸಂಭವಿಸಿದೆ. ಮೇಲಿನ ಕುಂಚೇನಹಳ್ಳಿಯ ಸುನಿಲ್ ಎಂಬುವವರಿಗೆ ಸೇರಿದ ಟ್ರಾಕ್ಟರ್ ರಸ್ತೆ ದಾಟುವಾಗ ಕಾರು ಮತ್ತು ಬಸ್ಸು ಡಿಕ್ಕಿಯಾಗಿದೆ (Collision). ಕಾರು ಶಿಕಾರಿಪುರ ಕಡೆಯಿಂದ ಶಿವಮೊಗ್ಗ ಕಡೆಗೆ ತೆರಳುತ್ತಿತ್ತು. ಬಸ್ಸು ಶಿವಮೊಗ್ಗ ಕಡೆಯಿಂದ ಶಿಕಾರಿಪುರಕ್ಕೆ ಹೋಗುತ್ತಿತ್ತು.

ಎರಡು ಭಾಗವಾದ ಟ್ರಾಕ್ಟರ್
ಘಟನೆಯಲ್ಲಿ ಟ್ರಾಕ್ಟರ್‌ನ ಇಂಜಿನ್ ಎರಡು ಭಾಗವಾಗಿದೆ. ಟ್ರಾಕ್ಟರ್ ಚಾಲಕ ಸುನಿಲ್ ಎಂಬುವವರಿಗೆ ಗಾಯವಾಗಿದ್ದು (Injured), ಅವರನ್ನು ಕೂಡಲೇ ಆಸ್ಪತ್ರೆಗೆ (Hospitalized) ಕರೆದೊಯ್ಯಲಾಗಿದೆ. ಇನ್ನು, ಕಾರು ಮತ್ತು ಬಸ್ಸಿನಲ್ಲಿದ್ದ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ (Casualties) ಸಂಭವಿಸಿಲ್ಲ. ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆ (Shivamogga Rural Police Station) ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
