ಆಯನೂರು ಸಮೀಪದ ಗೊಲ್ಲರಕೊಪ್ಪದಲ್ಲಿ ಅರಣ್ಯ ಇಲಾಖೆಯ ಕ್ಯಾಮರಾ ಕಾಳವು, ಆಗಿದ್ದೇನು?

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ
NEWS HIGHLIGHTS

ಶಿವಮೊಗ್ಗ: ತಾಲೂಕಿನ ಗೊಲ್ಲರಕೊಪ್ಪ ಗ್ರಾಮದ ಸಮೀಪ ಅರಣ್ಯ ಪ್ರದೇಶದಲ್ಲಿ ಹುಲಿ ಗಣತಿಗಾಗಿ ಅರಣ್ಯ ಇಲಾಖೆ (Forest Department) ಇರಿಸಿದ್ದ ಡಿಜಿಟಲ್ ಕ್ಯಾಮೆರಾ ಕಳುವಾಗಿದೆ (Theft).

➤ ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ.

ಅರಣ್ಯ ಇಲಾಖೆಯು ಹುಲಿ ಗಣತಿಗಾಗಿ ಗೊಲ್ಲರಕೊಪ್ಪ ಗ್ರಾಮದ ವಡ್ಡಗಟ್ಟಿಸರ ಕೆರೆಯ ರಸ್ತೆಯ ಪಕ್ಕದಲ್ಲಿ ಡಿಜಿಟಲ್ ಕ್ಯಾಮೆರಾವನ್ನು (Cuddeback Digital Camera) ಅಳವಡಿಸಿತ್ತು. ಇಲಾಖೆಯ ಸಿಬ್ಬಂದಿ ಗಸ್ತಿನಲ್ಲಿದ್ದಾಗ ಕ್ಯಾಮೆರಾ ಅಳವಡಿಸಿದ ಸ್ಥಳಕ್ಕೆ ಭೇಟಿ ನೀಡಿದಾಗ, ಅಲ್ಲಿನ ಕ್ಯಾಮೆರಾ ಮತ್ತು ಅದಕ್ಕೆ ಅಳವಡಿಸಲಾಗಿದ್ದ ಮೆಮೊರಿ ಕಾರ್ಡ್‌ಗಳು (Memory Card) ನಾಪತ್ತೆಯಾಗಿದ್ದವು.

Kumsi-Police-Station-Shimoga

ಕಳುವಾದ ಕ್ಯಾಮೆರಾ ಮತ್ತು ಮೆಮೊರಿ ಕಾರ್ಡ್‌ನ ಅಂದಾಜು ಮೌಲ್ಯ ₹25,000 ಎಂದು ಅಂದಾಜಿಸಲಾಗಿದೆ. ಘಟನೆ ಸಂಬಂಧ ಆಯನೂರು ವಲಯದ ಮಲ್ಲಾಪುರ ಶಾಖೆಯ ಉಪ ವಲಯ ಅರಣ್ಯಾಧಿಕಾರಿ ಶರತ್‌ ಕುಮಾರ್‌ ಅವರು ದೂರು ನೀಡಿದ್ದಾರೆ. ಕುಂಸಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.