ಹೊಳೆಹೊನ್ನೂರು: ಪಟ್ಟಣದ ಎಸ್‌ಬಿಐ ಬ್ಯಾಂಕ್ (SBI Bank) ಬಳಿ ನಿಲ್ಲಿಸಿದ್ದ ಬೈಕ್ ಕಳ್ಳತನವಾಗಿದೆ (Bike Theft). ಭದ್ರಾವತಿ ತಾಲೂಕಿನ ಅರಬಿಳಚಿ ಕ್ಯಾಂಪ್ ನಿವಾಸಿ ಜಿ.ಎಂ. ಕುಮಾರ್ ಎಂಬುವರು ಬೈಕ್ ಕಳೆದುಕೊಂಡಿದ್ದಾರೆ.
ಮೇ 11ರಂದು ಸಂಜೆ ಹೊಳೆಹೊನ್ನೂರು ಪಟ್ಟಣದ ಎನ್‌ಟಿ ಸರ್ಕಲ್ ಬಳಿ ಈ ಕಳ್ಳತನ ನಡೆದಿದೆ. ವರ್ಷ ಎಂಬುವವರು ಕೆಲಸದ ನಿಮಿತ್ತ ಎನ್.ಟಿ.ಸರ್ಕಲ್ (NT Circle) ಬಳಿ ಅಂಗಡಿಗೆ ಬಂದಿದ್ದರು. ಸಂಜೆ ಅಂಗಡಿ ಪಕ್ಕದ ಬ್ಯಾಂಕ್ ಮುಂಭಾಗ ಬೈಕ್ ನಿಲ್ಲಿಸಿದ್ದರು. ಕೆಲಸ ಮುಗಿಸಿ ವಾಪಸ್ ಬಂದಾಗ ಬೈಕ್ ನಾಪತ್ತೆಯಾಗಿತ್ತು. ಅಕ್ಕಪಕ್ಕದವರಲ್ಲಿ ವಿಚಾರಿಸಿದರೂ ಬೈಕ್ ಪತ್ತೆಯಾಗಿಲ್ಲ ಎಂದು ದೂರಿನಲ್ಲಿ ಆಪಾದಿಸಲಾಗಿದೆ. ಘಟನೆ ಸಂಬಂಧ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ (Holehonnur Police Station) ಪ್ರಕರಣ ದಾಖಲಾಗಿದೆ.

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್ ನಂಬರ್: 7411700200
