ಹವಾಮಾನ ವರದಿ: ಶಿವಮೊಗ್ಗ ಜಿಲ್ಲೆಯ (Shivamogga district) ವಿವಿಧೆಡೆ ಇವತ್ತು ಬಿಸಿಲಿನ ವಾತಾವರಣ (Sunny weather) ಇರಲಿದೆ. ಜೊತೆಗೆ ಅಲ್ಲಲ್ಲಿ ಮೋಡ ಕವಿದ ವಾತಾವರಣವು (Cloudy weather) ಇರಲಿದೆ. ಹಲವೆಡೆ ಮಧ್ಯಾಹ್ನದ ವೇಳೆಗೆ ಗುಡುಗು ಸಹಿತ ಮಳೆಯ (Thunderstorms) ಸಂಭವವು ಇದೆ.
ಎಲ್ಲೆಲ್ಲಿ ಹೇಗಿರುತ್ತೆ ವಾತಾವರಣ?
ಶಿವಮೊಗ್ಗ, ಭದ್ರಾವತಿ: ಇಂದು ಗರಿಷ್ಠ ತಾಪಮಾನ (Maximum temperature) 31°C ಮತ್ತು ಕನಿಷ್ಠ ತಾಪಮಾನ (Minimum temperature) 22°C ಇರಲಿದೆ. ಮೋಡ ಕವಿದ ವಾತಾವರಣ ಇರಲಿದೆ. ಮಧ್ಯಾಹ್ನದ ವೇಳೆಗೆ ಕೆಲವು ಕಡೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ (Possibility of rain) ಇದೆ.

ಶಿಕಾರಿಪುರ: ಇಂದು ಗರಿಷ್ಠ ತಾಪಮಾನ 30°C, ಕನಿಷ್ಠ ತಾಪಮಾನ 23°C ಇರಲಿದೆ. ಬಿಸಿಲು ಮತ್ತು ಮೋಡ ಕವಿದ ವಾತಾವರಣವಿರಲಿದೆ. ವಿವಿಧೆಡೆ ಮಳೆಯಾಗಲಿದೆ.
ಸೊರಬ: ಇವತ್ತು ಗರಿಷ್ಠ ತಾಪಮಾನ 30°C ಹಾಗೂ ಕನಿಷ್ಠ ತಾಪಮಾನ 22°C ಇರಲಿದೆ. ಬಿಸಿಲು ಮತ್ತು ಮೋಡದ ವಾತಾವರಣ. ಕೆಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ.

ಹೊಸನಗರ: ಈ ದಿನ ಗರಿಷ್ಠ ತಾಪಮಾನ 29°C ಮತ್ತು ಕನಿಷ್ಠ ತಾಪಮಾನ 22°C ದಾಖಲಾಗಲಿದೆ. ಬೆಳಗ್ಗೆ ಹಾಗೂ ಮಧ್ಯಾಹ್ನದ ವೇಳೆಗೆ ಕೆಲವೆಡೆ ಸಾಧಾರಣ ಮಳೆ (Moderate rain) ಸಾಧ್ಯತೆ.
ಸಾಗರ: ಇವತ್ತು ಗರಿಷ್ಠ 28°C ಹಾಗೂ ಕನಿಷ್ಠ 22°C ಇರಲಿದೆ. ಮೋಡ ಕವಿದ ವಾತಾವರಣ. ಬಿಸಿಲು ಇರಲಿದೆ. ಸಂಜೆ ಅಥವಾ ರಾತ್ರಿ (Evening or night) ಗುಡುಗು ಸಹಿತ ಮಳೆ ಸಾಧ್ಯತೆ.
ತೀರ್ಥಹಳ್ಳಿ: ಇವತ್ತು ಕನಿಷ್ಠ ತಾಪಮಾನ 21°C ಹಾಗೂ ಗರಿಷ್ಠ ತಾಪಮಾನ 28°C ಇರಲಿದೆ. ಮೋಡ ಮತ್ತು ಬಿಸಿಲಿನ ವಾತಾವರಣ. ಗುಡುಗು ಸಹಿತ ಮಳೆ ಸಾಧ್ಯತೆ.
