ಲಂಡನ್‌ ಬೆಡಗಿ ಮೆಸೇಜ್‌ಗೆ ಮರುಳಾಗಿ ₹18 ಲಕ್ಷ ಕಳೆದುಕೊಂಡ ಶಿವಮೊಗ್ಗದ ಇಂಜಿನಿಯರ್‌

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ
NEWS HIGHLIGHTS

ಶಿವಮೊಗ್ಗ: ಮ್ಯಾಟ್ರಿಮೋನಿ ಆ್ಯಪ್ (Matrimony app) ಮೂಲಕ ಪರಿಚಯವಾದ ಲಂಡನ್ ಮೂಲದ (London based) ಯುವತಿಯ ಆಮಿಷಕ್ಕೆ ಒಳಗಾದ ಇಲ್ಲಿನ ಸಾಫ್ಟ್‌ವೇರ್ ಇಂಜಿನಿಯರ್ (Software Engineer) ಒಬ್ಬರು ಆನ್‌ಲೈನ್ ಟ್ರೇಡಿಂಗ್ (Online trading) ಹೆಸರಿನಲ್ಲಿ ಬರೋಬ್ಬರಿ ₹18 ಲಕ್ಷ ಕಳೆದುಕೊಂಡು ವಂಚನೆಗೊಳಗಾಗಿದ್ದಾರೆ (Defrauded).

➤ ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ.

ಮ್ಯಾಟ್ರಿಮೋನಿಯಲ್ಲಿ ಪರಿಚಯ

ಶಿವಮೊಗ್ಗದ ಸಾಫ್ಟ್‌ವೇರ್ ಇಂಜಿನಿಯರ್ ಒಬ್ಬರು ಮ್ಯಾಟ್ರಿಮೋನಿ ಆ್ಯಪ್‌ನಲ್ಲಿ ಪ್ರೊಫೈಲ್ ಐಡಿ (Profile ID) ಒಂದನ್ನು ಗಮನಿಸಿದ್ದರು. ಅದರಲ್ಲಿ ನೀಡಲಾಗಿದ್ದ ಮೊಬೈಲ್ ಸಂಖ್ಯೆಗಳನ್ನು ಸೇವ್ ಮಾಡಿಕೊಂಡು ವಾಟ್ಸ್ ಆ್ಯಪ್ (WhatsApp) ಮೂಲಕ ಸಂಪರ್ಕ ಬೆಳೆಸಿದ್ದರು. ಈ ವೇಳೆ ಆಕೆ ತನ್ನ ಹೆಸರು ವಿಮರ್ಶ ಎಂದು, ತಾನು ಲಂಡನ್‌ನಲ್ಲಿ ಚಿಕ್ಕಪ್ಪನ ಜೊತೆ ವಾಸವಾಗಿರುವುದಾಗಿ ನಂಬಿಸಿದ್ದಳು.

Shivamogga-CEN-Police-Station

ಆನ್‌ಲೈನ್ ಟ್ರೇಡಿಂಗ್ ಆಮಿಷ

ಬಳಿಕ ಆರೋಪಿಗಳು ವೆಬ್‌ಸೈಟ್‌ (Website) ಒಂದರಲ್ಲಿ ಟ್ರೇಡ್ ಮಾಡಿದರೆ ಹೆಚ್ಚಿನ ಲಾಭಾಂಶ (High returns) ಬರುತ್ತದೆ ಎಂದು ನಂಬಿಸಿ ಹಣ ಹೂಡಿಕೆ (Investment) ಮಾಡಲು ಪ್ರೇರೇಪಿಸಿದ್ದರು. ಅದಕ್ಕಾಗಿ ವಾಟ್ಸ್ ಆ್ಯಪ್ ಮೂಲಕ ಬ್ಯಾಂಕ್‌ ಖಾತೆ ವಿವರಗಳನ್ನು (Bank account details) ಕಳುಹಿಸಿಕೊಟ್ಟಿದ್ದರು. ಇದನ್ನು ನಂಬಿದ ಶಿವಮೊಗ್ಗದ ಸಾಫ್ಟ್‌ವೇರ್‌ ಇಂಜಿನಿಯರ್‌, ಹಂತ ಹಂತವಾಗಿ 4 ಬಾರಿ ಆನ್‌ಲೈನ್ ಮೂಲಕ ಒಟ್ಟು ₹18,00,000 ಹಣವನ್ನು ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ (Transfer) ಮಾಡಿದ್ದರು.

ಹಣ ಪಡೆದು ಅಕೌಂಟ್ ಡಿಆಕ್ಟಿವೇಟ್

ಹಣವನ್ನು ಡಾಲರ್‌ಗೆ (Dollars) ಬದಲಾಯಿಸಿ ಟ್ರೇಡ್ ಮಾಡಿಸಿದಂತೆ ತೋರಿಸಿದ ಆರೋಪಿಗಳು ಶಿವಮೊಗ್ಗದ ಸಾಫ್ಟ್‌ವೇರ್‌ ಇಂಜಿನಿಯರ್‌ ಅವರ ಟ್ರೇಡಿಂಗ್ ಖಾತೆಯನ್ನು ಡಿಆಕ್ಟಿವೇಟ್ (Deactivate) ಮಾಡಿದ್ದಾರೆ. ಇದರಿಂದ ಅನುಮಾನಗೊಂಡು ಸ್ನೇಹಿತರಲ್ಲಿ ವಿಚಾರಿಸಿದಾಗ ತಾವು ವಂಚನೆಗೊಳಗಾಗಿರುವುದು ಅರಿವಾಗಿದೆ. ಘಟನೆ ಸಂಬಂಧ ಸಿಇಎನ್ ಪೊಲೀಸ್ ಠಾಣೆಯಲ್ಲಿ (CEN Police Station) ಪ್ರಕರಣ ದಾಖಲಾಗಿದೆ.