ಅವೈಜ್ಞಾನಿಕ ಡಿವೈಡರ್‌, ಭದ್ರಾವತಿಯಲ್ಲಿ ರಸ್ತೆಗಿಳಿದ ಜೆಡಿಎಸ್‌ ಕಾರ್ಯಕರ್ತರು

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ
NEWS HIGHLIGHTS

ಭದ್ರಾವತಿ: ಇಲ್ಲಿನ ಬಿ.ಎಚ್. ರಸ್ತೆಯಲ್ಲಿ (B.H. Road) ನಡೆಯುತ್ತಿರುವ ರಸ್ತೆ ವಿಭಜಕ (road divider) ಕಾಮಗಾರಿ ಅವೈಜ್ಞಾನಿಕವಾಗಿದೆ ಎಂದು ಆರೋಪಿಸಿ ಜಾತ್ಯತೀತ ಜನತಾದಳ (JDS) ಪಕ್ಷದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

➤ ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ.

ಕೆಎಸ್‌ಆರ್‌ಟಿಸಿ (KSRTC) ಬಸ್‌ ನಿಲ್ದಾಣದಿಂದ ಬೈಪಾಸ್ ವೃತ್ತದವರೆಗೆ ಹಾಲಿ ನಿರ್ಮಿಸಲಾಗಿರುವ ರಸ್ತೆ ವಿಭಜಕಗಳ ವಿನ್ಯಾಸ ಅವೈಜ್ಞಾನಿಕವಾಗಿದೆ ಎಂದು ಪ್ರತಿಭಟನಕಾರರು ದೂರಿದರು. ವಿಭಜಕಗಳ ಹೊರಮೈ ರಸ್ತೆಗೆ ಚಾಚಿಕೊಂಡಿದ್ದು ಅಪಘಾತಗಳಿಗೆ ಕಾರಣವಾಗುತ್ತಿವೆ. ಅಲ್ಲದೇ ವಿಭಜಕಗಳ ನಡುವೆ ವಿದ್ಯುತ್ ದೀಪಗಳ ಕಂಬಗಳನ್ನು ನಿಲ್ಲಿಸಲು ಹಾಕಿರುವ ಕಾಂಕ್ರೀಟ್ ತಳಪಾಯವೂ ರಸ್ತೆಗೆ ಚಾಚಿಕೊಂಡಿರುವುದರಿಂದ ವಾಹನ ಸಂಚಾರಕ್ಕೆ ತೊಡಕುಂಟಾಗುತ್ತಿದೆ ಎಂದು ಜೆಡಿಎಸ್ ಮುಖಂಡ ಅಜಿತ್ ಅಪ್ಪಾಜಿ ಆರೋಪಿಸಿದರು.

Bhadravathi-JDS-leaders-protest-against-dividers-in-BH-Road.

ಸಾರ್ವಜನಿಕರ ತೀವ್ರ ವಿರೋಧವಿದ್ದರೂ ಈಗ ಮತ್ತೆ ಅದೇ ಹಳೆಯ ವಿನ್ಯಾಸದಲ್ಲೇ ಹಾಲಪ್ಪ ವೃತ್ತದ ಬಳಿ ರಸ್ತೆ ವಿಭಜಕಗಳನ್ನು ನಿರ್ಮಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಹೀಗಾಗಿ ಅವೈಜ್ಞಾನಿಕವಾಗಿ ನಡೆಯುತ್ತಿರುವ ಕಾಮಗಾರಿಯನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಆಗ್ರಹಿಸಿ ಪ್ರತಿಭಟನಕಾರರು ಘೋಷಣೆಗಳನ್ನು ಕೂಗಿದರು.

ಇನ್ನು, ಅಕ್ರಮ ರಸ್ತೆ ವಿಭಜಕ ನಿರ್ಮಾಣ, ನಗರದ ಹಾಲಪ್ಪ ವೃತ್ತದ ಬಳಿ ಮುಖ್ಯ ರಸ್ತೆಯ ಮಧ್ಯದಲ್ಲಿ ಸೂಕ್ತ ಅನುಮತಿಯಾಗಲಿ, ಸುರಕ್ಷತಾ ನಿಯಮಗಳನ್ನಾಗಲಿ ಪಾಲಿಸದೆ ಕಾನೂನುಬಾಹಿರವಾಗಿ ರಸ್ತೆ ವಿಭಾಜಕಗಳನ್ನು (Dividers) ನಿರ್ಮಿಸುತ್ತಿರುವುದನ್ನು ಖಂಡಿಸಿ ಜೆಡಿಎಸ್‌ ಮುಖಂಡರು ನಗರಸಭೆ ಆಯುಕ್ತರಿಗೆ ಮನವಿ ಸಲ್ಲಿಸಿದರು.