ಶಿವಮೊಗ್ಗದಲ್ಲಿ ಕ್ರಿಕೆಟ್‌ ಬೆಟ್ಟಿಂಗ್‌, ಪೊಲೀಸ್‌ ರೇಡ್‌, ಆರು ಮಂದಿ ಅರೆಸ್ಟ್‌

ಶಿವಮೊಗ್ಗ: ಸಾಗರ ರಸ್ತೆಯ ಆ‌ರ್.ಎಂ.ಸಿ. ಗೇಟ್ (RMC gate) ಬಳಿ ಕಾರಿನಲ್ಲಿ ಕುಳಿತು ಐಪಿಎಲ್ ಕ್ರಿಕೆಟ್ ಪಂದ್ಯಾವಳಿಗೆ (IPL cricket tournament) ಬೆಟ್ಟಿಂಗ್ ಕಟ್ಟುತ್ತಿದ್ದ ಐವರನ್ನು ವಿನೋಬನಗರ ಠಾಣೆ ಪೊಲೀಸರು ದಾಳಿ (Raid) ನಡೆಸಿ ಬಂಧಿಸಿದ್ದಾರೆ.

ಮೇ 21 ರಂದು ರಾತ್ರಿ ಪೊಲೀಸರು ಗಸ್ತು (Patrolling) ತಿರುಗುತ್ತಿದ್ದಾಗ, ಎಕ್ಸ್‌ಯುವಿ 300 (XUV 300) ಕಾರಿನಲ್ಲಿ ಗುಂಪು ಕಟ್ಟಿಕೊಂಡು ಮೊಬೈಲ್ ಆಪ್ (Mobile app) ಮೂಲಕ ಐಪಿಎಲ್ 20-20 ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿರುವ ಬಗ್ಗೆ ಖಚಿತ ಮಾಹಿತಿ (Definite information) ಲಭಿಸಿತ್ತು.

Police-Jeep-With-Light-New.

ಮೊಬೈಲ್‌ ಆಪ್‌ನಲ್ಲಿ ಬೆಟ್ಟಿಂಗ್

ಬಂಧಿತರು ಮೊಬೈಲ್ ಆಪ್ ಬಳಸಿ ಕ್ರಿಕೆಟ್ ಬೆಟ್ಟಿಂಗ್ ಆಡುತ್ತಿರುವುದಾಗಿ ಒಪ್ಪಿಕೊಂಡಿದ್ದಾರೆ (Confessed). ಆರೋಪಿಗಳಿಂದ ಬೆಟ್ಟಿಂಗ್‌ಗೆ ಬಳಸಿದ್ದ ₹35,000 ನಗದು ಹಣ (Cash), 7 ಮೊಬೈಲ್ ಫೋನ್‌ಗಳು ಹಾಗೂ ₹6 ಲಕ್ಷ ಮೌಲ್ಯದ ಮಹೇಂದ್ರ ಎಕ್ಸ್‌ಯುವಿ 300 ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ (Seized).

ಈ ದಂಧೆಯ ಹಣವನ್ನು ತುಮಕೂರು ನಿವಾಸಿಯೊಬ್ಬರಿಗೆ ತಲುಪಿಸುತ್ತಿರುವುದಾಗಿ ವಿಚಾರಣೆ (Investigation) ವೇಳೆ ತಿಳಿದುಬಂದಿದೆ. ಪಿಎಸ್‌ಐ (PSI) ತಿರುಮಲೇಶ್‌ ನೇತೃತ್ವದಲ್ಲಿ ದಾಳಿ ನಡೆಸಲಾಗಿತ್ತು. ಈ ಸಂಬಂಧ ವಿನೋಬನಗರ ಪೊಲೀಸ್ ಠಾಣೆಯಲ್ಲಿ (Vinobhanagar Police Station) ಪ್ರಕರಣ ದಾಖಲಾಗಿದೆ.

Kalleshwara-Enterprises.webp
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್‌ ನಂಬರ್: 7411700200
Kalleshwara-Enterprises.webp