ಶಿವಮೊಗ್ಗ: ಪರವಾನಗಿ ಇಲ್ಲದೆ (Without permission) ಮದ್ಯ ಸೇವನೆ ಮಾಡಲು ಅವಕಾಶ ಮಾಡಿಕೊಟ್ಟವರಿಗೆ ಕುಂಸಿ ಠಾಣೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ನಾಲ್ಕು ಕಡೆ ಪ್ರತ್ಯೇಕವಾಗಿ ದಾಳಿ (Raid) ನಡೆಸಿ ಪ್ರಕರಣಗಳನ್ನು ದಾಖಲು (Cases registered) ಮಾಡಿದ್ದಾರೆ.
ಎಲ್ಲೆಲ್ಲಿ ದಾಳಿಯಾಯ್ತು?
ದಾಳಿ 1: ಕುಂಸಿ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ (Sub-Inspector) ಮತ್ತು ಸಿಬ್ಬಂದಿ ಆಯನೂರು ಗ್ರಾಮದ ಎಗ್ ರೈಸ್ ಅಂಗಡಿಯೊಂದರ (Egg rice shop) ಮುಂದೆ ದಾಳಿ ನಡೆಸಿದ್ದಾರೆ. ಪರವಾನಗಿ ಇಲ್ಲದೆ ಸಾರ್ವಜನಿಕವಾಗಿ ಮದ್ಯಪಾನ ಮಾಡುತ್ತಿದ್ದವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ದಾಳಿ 2: ಆಯನೂರು ಮಾರುಕಟ್ಟೆ (Market) ಬಳಿ ಇರುವ ಅಂಗಡಿಯೊಂದರ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಅಂಗಡಿಯ ಮುಂದೆ ಅಕ್ರಮವಾಗಿ (Illegally) ಮದ್ಯ ಸೇವನೆಗೆ ಅವಕಾಶ ಮಾಡಿಕೊಡಲಾಗಿತ್ತು. ಮದ್ಯದ ಪೌಚ್‌ಗಳನ್ನು ವಶಕ್ಕೆ (Seized) ಪಡೆಯಲಾಗಿದೆ.
ದಾಳಿ 3: ಆಯನೂರು ಗ್ರಾಮದ ಹಳೇ ನಾಡಕಚೇರಿ (Old Nadakacheri) ಬಳಿ ಇರುವ ಅಂಗಡಿಯೊಂದರ ಮುಂದೆ ಪೊಲೀಸರು ದಾಳಿ ನಡೆಸಿದರು. ಅಕ್ರಮವಾಗಿ ಮದ್ಯಪಾನಕ್ಕೆ ಅವಕಾಶ ನೀಡಿದ ಅಂಗಡಿ ಮಾಲೀಕನ ವಿರುದ್ಧ ಕರ್ನಾಟಕ ಅಬಕಾರಿ ಕಾಯ್ದೆಯಡಿ (Karnataka Excise Act) ಕೇಸ್ ದಾಖಲಿಸಲಾಗಿದೆ.

ದಾಳಿ 4: ಆಯನೂರು ಗ್ರಾಮದ ಕೆಳಭಾಗದ ಮಾರುಕಟ್ಟೆ ರಸ್ತೆಯಲ್ಲಿರುವ ಹೋಟೆಲ್ (Hotel) ಒಂದರ ಮುಂಭಾಗದಲ್ಲಿಯು ದಾಳಿ ನಡೆಸಲಾಗಿದೆ. ಹೋಟೆಲ್ ಎದುರು ಮದ್ಯ ಸೇವನೆಗೆ ಅವಕಾಶ ಮಾಡಿಕೊಡಲಾಗಿತ್ತು. ಘಟನೆ ಸಂಬಂಧ ಪ್ರಕರಣ ದಾಖಲಾಗಿದೆ.
