ಆಟೋಮೊಬೈಲ್ ಸುದ್ದಿ: ದೇಶದ ವಾಹನ ಮಾರುಕಟ್ಟೆಯಲ್ಲಿ ಹೈಬ್ರಿಡ್ ಕಾರುಗಳಿಗೆ ಬೇಡಿಕೆ ಹೆಚ್ಚುತ್ತಿರುವ ಬೆನ್ನಲ್ಲೇ, ಪ್ರಮುಖ ಕಾರು ತಯಾರಿಕಾ ಸಂಸ್ಥೆ ನಿಸಾನ್ (Nissan) ತನ್ನ ಬಹುನಿರೀಕ್ಷಿತ ‘ಟೆಕ್ಟಾನ್’ (Nissan Tekton) ಹೈಬ್ರಿಡ್ SUV ಕಾರನ್ನು ಜುಲೈ 9 ರಂದು ಅನಾವರಣಗೊಳಿಸಲು ಸಜ್ಜಾಗಿದೆ.
ಸದ್ಯ SUV ಮಾರುಕಟ್ಟೆಯಲ್ಲಿ ಲಭ್ಯವಿರುವ ಹುಂಡೈ ಕ್ರೆಟಾ, ಕಿಯಾ ಸೆಲ್ಟೋಸ್, ಮಾರುತಿ ಸುಜುಕಿ ಗ್ರಾಂಡ್ ವಿಟಾರಾ ಮತ್ತು ಟೊಯೋಟಾ ಹೈರೈಡರ್ ಕಾರುಗಳಿಗೆ ನಿಸಾನ್ ಟೆಕ್ಟಾನ್ ಪೈಪೋಟಿ ನೀಡುವ ನಿರೀಕ್ಷೆಯಿದೆ. ಈ ಕಾರು ರೆನಾಲ್ಟ್ ಡಸ್ಟರ್ (Renault Duster) ಕಾರಿನ ಪ್ಲಾಟ್‌ಫಾರ್ಮ್ ಮತ್ತು ಎಂಜಿನ್ ತಂತ್ರಜ್ಞಾನವನ್ನೇ ಹಂಚಿಕೊಂಡಿದೆ. ಆದರೆ ವಿನ್ಯಾಸದಲ್ಲಿ ಡಸ್ಟರ್‌ಗಿಂತ ಸಂಪೂರ್ಣವಾಗಿ ವಿಭಿನ್ನ ಹಾಗೂ ಪ್ರೀಮಿಯಂ ಲುಕ್ ಹೊಂದಿರಲಿದೆ.

ಮೂರು ವಿಭಿನ್ನ ಎಂಜಿನ್ ಆಯ್ಕೆ
ನಿಸಾನ್ ಟೆಕ್ಟಾನ್ ಎಸ್‌ಯುವಿ ಮೂರು ವಿಭಿನ್ನ ಎಂಜಿನ್ ಆಯ್ಕೆಗಳಲ್ಲಿ ಗ್ರಾಹಕರಿಗೆ ಲಭ್ಯವಾಗಲಿದೆ. ಸ್ಟ್ರಾಂಗ್ ಹೈಬ್ರಿಡ್ ಎಂಜಿನ್, ಟರ್ಬೋ ಪೆಟ್ರೋಲ್ ಎಂಜಿನ್, ಬೇಸ್ ಎಂಜಿನ್ ಮಾದರಿಗಳಲ್ಲಿ ಕಾರು ಲಭ್ಯವಾಗಲಿದೆ.
ಕಾರಿನ ಒಳಭಾಗದಲ್ಲಿ 10.1 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ ನೀಡಲಾಗಿದೆ. ಇದರೊಂದಿಗೆ 10.25 ಇಂಚಿನ ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಪ್ಯಾನರೋಮಿಕ್ ಸನ್‌ರೂಫ್, ವೈರ್‌ಲೆಸ್ ಫೋನ್ ಚಾರ್ಜರ್, ಡ್ಯುಯಲ್ ಝೋನ್ ಎಸಿ ಮತ್ತು ಪವರ್ಡ್ ಟೇಲ್‌ಗೇಟ್ ವೈಶಿಷ್ಟ್ಯಗಳಿವೆ. ಸುರಕ್ಷತೆಗಾಗಿ 6 ಏರ್‌ಬ್ಯಾಗ್‌ಗಳು, 360 ಡಿಗ್ರಿ ಕ್ಯಾಮೆರಾ ಮತ್ತು ಅಡ್ವಾನ್ಸಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ (Level 2 ADAS) ತಂತ್ರಜ್ಞಾನವನ್ನು ಅಳವಡಿಸಲಾಗಿದೆ.

