ಆಯನೂರಿನಲ್ಲಿ ರಾತ್ರೋರಾತ್ರಿ ಟಗರುಗಳ ಕಳ್ಳತನ, ಹೇಗಾಯ್ತು ಘಟನೆ?

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ
NEWS HIGHLIGHTS

ಶಿವಮೊಗ್ಗ: ಆಯನೂರು ಗ್ರಾಮದಲ್ಲಿ ಮನೆಯ ಹಿಂಭಾಗದ ಶೆಡ್‌ನ ಬಾಗಿಲಿನ ಶೀಟ್ ಕತ್ತರಿಸಿ ಎರಡು ಟಗರುಗಳನ್ನು ಕಳ್ಳತನ ಮಾಡಿರುವ ಘಟನೆ ನಡೆದಿದೆ.

➤ ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ.

ಆಯನೂರಿನ ಬಿ.ಹೆಚ್. ರಸ್ತೆಯ ನಯಾರಾ ಪೆಟ್ರೋಲ್ ಬಂಕ್ ಬಳಿಯ ನಿವಾಸಿ ಭೀಮಾನಾಯ್ಕ ತಮ್ಮ ಮನೆಯ ಹಿಂಭಾಗದ ಶೆಡ್‌ನಲ್ಲಿ ಟಗರುಗಳನ್ನು ಸಾಕಿದ್ದರು. ಮೇ 10ರ ರಾತ್ರಿ ಎಂದಿನಂತೆ ಟಗರುಗಳನ್ನು ಶೆಡ್‌ನಲ್ಲಿ ಕಟ್ಟಿ ಹಾಕಿ ಕುಟುಂಬದವರು ಮಲಗಿದ್ದರು. ಮರುದಿನ ಬೆಳಗಿನ ಜಾವ ಎದ್ದು ನೋಡಿದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

Ayanur Graphics

ಕಳ್ಳರು ಶೆಡ್‌ನ ಬಾಗಿಲಿನ ಶೀಟ್ ಕತ್ತರಿಸಿ ಒಳಗಿದ್ದ ಎರಡು ಟಗರುಗಳನ್ನು ಕಳವು ಮಾಡಿದ್ದಾರೆ. ಕಳುವಾದ ಟಗರುಗಳ ಅಂದಾಜು ಮೌಲ್ಯ ₹60,000 ಎಂದು ಅಂದಾಜಿಸಲಾಗಿದೆ. ಈ ಕುರಿತು ಮಾಲೀಕರು ತಡವಾಗಿ ಕುಂಸಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.