ಶಿವಮೊಗ್ಗದ ಕೃಷಿಕನ ವಾಟ್ಸಪ್‌ನಲ್ಲಿ ದಿಢೀರ್‌ ಕಾಣಿಸ್ತು VIP ಗ್ರೂಪ್‌,  ಆಮೇಲೆ ಕಾದಿತ್ತು ಆಘಾತ, ಆಗಿದ್ದೇನು?

ಶಿವಮೊಗ್ಗ: ಷೇರು ಮಾರುಕಟ್ಟೆ ಟ್ರೇಡಿಂಗ್‌ನಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ನೀಡುವುದಾಗಿ ನಂಬಿಸಿ ಶಿವಮೊಗ್ಗದ ನಿವಾಸಿಯೊಬ್ಬರಿಗೆ ಸೈಬರ್ ವಂಚಕರು ಬರೋಬ್ಬರಿ ₹9.91 ಲಕ್ಷ ವಂಚಿಸಿದ್ದಾರೆ.

ಶಿವಮೊಗ್ಗದ ಕೃಷಿಕರೊಬ್ಬರು ಕಳೆದ ಮಾರ್ಚ್‌ ತಿಂಗಳಿನಲ್ಲಿ ವಾಟ್ಸ್ ಆಪ್ ನೋಡುತ್ತಿದ್ದಾಗ, ಅಪರಿಚಿತರು ಇವರ ಮೊಬೈಲ್ ಸಂಖ್ಯೆಯನ್ನು VIP ಹೆಸರಿನ ವಾಟ್ಸ್ ಆಪ್ ಗ್ರೂಪ್‌ವೊಂದಕ್ಕೆ ಸೇರಿಸಿದ್ದರು. ಆ ಗ್ರೂಪ್‌ನಲ್ಲಿ ಟ್ರೇಡಿಂಗ್ ಕಂಪನಿಯೊಂದರ ಹೆಸರಿನಲ್ಲಿ ಮೆಸೇಜ್‌ಗಳನ್ನು ಕಳುಹಿಸಲಾಗಿತ್ತು. ಕಂಪನಿಯ ಪ್ರತಿನಿಧಿಗಳಂತೆ ನಟಿಸಿದ ವಂಚಕರು, ತಮ್ಮಲ್ಲಿ ಹಣ ಹೂಡಿಕೆ ಮಾಡಿದರೆ ಅತಿ ಹೆಚ್ಚು ಲಾಭ ಗಳಿಸಿಕೊಡುವುದಾಗಿ ನಂಬಿಸಿದ್ದರು.

SMS-Fraud-Shimoga-CEN-Police-Station.

ಇದನ್ನು ನಿಜವೆಂದು ನಂಬಿದ ಶಿವಮೊಗ್ಗದ ಕೃಷಿಕ, ಮಾರ್ಚ್ 20 ರಿಂದ ಮೇ 15ರ ಅವಧಿಯಲ್ಲಿ ವಂಚಕರು ನೀಡಿದ ವಿವಿಧ ಬ್ಯಾಂಕ್ ಖಾತೆಗಳಿಗೆ ನಾಲ್ಕು ಹಂತಗಳಲ್ಲಿ ಒಟ್ಟು ₹9,91,081 ಹಣ ವರ್ಗಾವಣೆ ಮಾಡಿದ್ದರು. ನಂತರ ತಮ್ಮ ಖಾತೆಯಲ್ಲಿದ್ದ ಹಣವನ್ನು ವಿತ್ ಡ್ರಾ ಮಾಡಲು ಯತ್ನಿಸಿದಾಗ, ಒಟ್ಟು ಮೊತ್ತದ ಶೇ.20 ರಷ್ಟು ಹಣವನ್ನು ಕಮಿಷನ್ ರೂಪದಲ್ಲಿ ಮುಂಚಿತವಾಗಿ ಪಾವತಿಸುವಂತೆ ವಂಚಕರು ಷರತ್ತು ವಿಧಿಸಿ ವೆಬ್ ಪೇಜ್ ಕ್ಲೋಸ್ ಮಾಡಿದ್ದರು ಎಂದು ಆರೋಪಿಸಲಾಗಿದೆ.

ಮೋಸ ಹೋಗಿರುವುದು ಅರಿವಾದ ಹಿನ್ನೆಲೆ ಶಿವಮೊಗ್ಗದ ಕೃಷಿಕ ಬೆಂಗಳೂರಿನಲ್ಲಿರುವ ಆ ಕಂಪನಿಯ ಅಧಿಕೃತ ಸಂಖ್ಯೆಗೆ ಕರೆ ಮಾಡಿ ವಿಚಾರಿಸಿದ್ದಾರೆ. ಈ ವೇಳೆ ಆ ಕಂಪನಿಯ ಹೆಸರನ್ನು ದುರ್ಬಳಕೆ ಮಾಡಿಕೊಂಡು ಸೈಬರ್ ಕಳ್ಳರು ಈ ಕೃತ್ಯ ಎಸಗಿರುವುದು ದೃಢಪಟ್ಟಿದೆ. ಈ ಹಿನ್ನೆಲೆ ಸಿಇಎನ್ ಠಾಣೆಗೆ ದೂರು ನೀಡಿದ್ದಾರೆ. ವಿವಿಧ ಐಟಿ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ.

Kalleshwara-Enterprises.webp
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್‌ ನಂಬರ್: 7411700200
Kalleshwara-Enterprises.webp