ಹೊಳೆಹೊನ್ನೂರು: ಬಿ. ಬೀರನಹಳ್ಳಿಯ ಕಲ್ಯಾಣ ಮಂಟಪವೊಂದರ ಎದುರು ನಿಲ್ಲಿಸಲಾಗಿದ್ದ ಬೈಕ್ ಕಳ್ಳತನ ಮಾಡಲಾಗಿದೆ.
ಫೈಜಾನ್ ಉಲ್ಲಾ ಎಂಬುವವರು ಬಿ. ಬೀರನಹಳ್ಳಿಯ ಮಾಜ್ ಕಲ್ಯಾಣ ಮಂಟಪದ ಮುಂಭಾಗ ತಮ್ಮ ಬೈಕನ್ನು ನಿಲ್ಲಿಸಿ ಹೋಗಿದ್ದರು. ರಾತ್ರಿ ವಾಪಸ್ ಬಂದು ನೋಡಿದಾಗ ಬೈಕ್ ನಾಪತ್ತೆಯಾಗಿತ್ತು. ಕಳುವಾದ ಬೈಕಿನ ಅಂದಾಜು ಮೌಲ್ಯ ₹40,000 ಎಂದು ತಿಳಿಸಲಾಗಿದೆ. ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್ ನಂಬರ್: 7411700200
