ತುಂಗಾ, ಭದ್ರಾ, ಲಿಂಗನಮಕ್ಕಿ ಜಲಾಶಯಗಳ ಇಂದಿನ ನೀರಿನ ಮಟ್ಟ, ಇವತ್ತು ಎಷ್ಟಿದೆ ಒಳ, ಹೊರ ಹರಿವು?

DAM NEWS: ಲಿಂಗನಮಕ್ಕಿ, ಭದ್ರಾ ಹಾಗೂ ತುಂಗಾ ಜಲಾಶಯಗಳ ಇಂದಿನ ನೀರಿನ ಮಟ್ಟ ವಿವರ ಇಲ್ಲಿದೆ.

ಲಿಂಗನಮಕ್ಕಿ ಜಲಾಶಯ: ಗರಿಷ್ಠ ಮಟ್ಟ 1819 ಅಡಿಗಳಾಗಿದ್ದು, ಪ್ರಸ್ತುತ ನೀರಿನ ಮಟ್ಟ 1753.30 ಅಡಿಗೆ ತಲುಪಿದೆ. ಜಲಾಶಯಕ್ಕೆ ಸದ್ಯ 961 ಕ್ಯೂಸೆಕ್ ಒಳಹರಿವು ಇದೆ. ಪೆನ್‌ಸ್ಟಾಕ್ ಮತ್ತು ಸ್ಲೂಯಿಸ್ ಸೇರಿದಂತೆ ಒಟ್ಟು 4226 ಕ್ಯೂಸೆಕ್ ನೀರನ್ನು ಹೊರಗೆ ಹರಿಸಲಾಗುತ್ತಿದೆ. ಸದ್ಯ ಡ್ಯಾಂನಲ್ಲಿ 21.13 ಟಿಎಂಸಿ (ಶೇ 13.93) ನೀರು ಸಂಗ್ರಹವಿದೆ. ಕಳೆದ ವರ್ಷ ಇದೇ ದಿನ ಜಲಾಶಯದ ಮಟ್ಟ 1766.60 ಅಡಿಗಳಷ್ಟಿದ್ದು, 35.25 ಟಿಎಂಸಿ ನೀರು ಸಂಗ್ರಹವಿತ್ತು.

Bhadra-dam-General-Image

ಭದ್ರಾ ಜಲಾಶಯ: ಗರಿಷ್ಠ ಮಟ್ಟ 186 ಅಡಿಗಳಾಗಿದ್ದು, ಇಂದು 137 ಅಡಿ 3 ಇಂಚು ನೀರಿದೆ. 71.535 ಟಿಎಂಸಿ ಒಟ್ಟು ಸಂಗ್ರಹ ಸಾಮರ್ಥ್ಯದ ಈ ಜಲಾಶಯದಲ್ಲಿ ಪ್ರಸ್ತುತ 25.052 ಟಿಎಂಸಿ ನೀರು ಲಭ್ಯವಿದೆ. ಡ್ಯಾಂಗೆ ಸದ್ಯ 187 ಕ್ಯೂಸೆಕ್ ಒಳಹರಿವು ಇದೆ. ಬಲದಂಡೆ, ಎಡದಂಡೆ ನಾಲೆ ಹಾಗೂ ನದಿಗೆ ಸೇರಿ ಒಟ್ಟು 499 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಜಲಾಶಯದ ಮಟ್ಟ 141 ಅಡಿ 3 ಇಂಚು ಇದ್ದು, 27.751 ಟಿಎಂಸಿ ನೀರಿನ ಸಂಗ್ರಹವಿತ್ತು.

ತುಂಗಾ ಜಲಾಶಯ: ಗರಿಷ್ಠ ಮಟ್ಟ 588.24 ಇದ್ದು, ಇಂದಿನ ಮಟ್ಟ 586.78 ಮೀಟರ್. ಒಟ್ಟು 150 ಕ್ಯೂಸೆಕ್ ಒಳಹರಿವು ಇದೆ. 90 ಕ್ಯೂಸೆಕ್ ನೀರು ಹೊರ ಹರಿವು ದಾಖಲಾಗಿದೆ. ಪ್ರಸ್ತುತ ಜಲಾಶಯದಲ್ಲಿ 1.606 ಟಿಎಂಸಿ ನೀರು ಸಂಗ್ರಹವಿದೆ. ಕಳೆದ ವರ್ಷ ಇದೇ ದಿನ ಜಲಾಶಯದಲ್ಲಿ 587.72 ಮೀಟರ್ ನೀರಿನ ಸಂಗ್ರಹವಿತ್ತು. 6271 ಕ್ಯೂಸೆಕ್ ಒಳಹರಿವು ಇತ್ತು.

Kalleshwara-Enterprises.webp
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್‌ ನಂಬರ್: 7411700200
Kalleshwara-Enterprises.webp