ವಿನೋಬನಗರ ಪೊಲೀಸರಿಂದ ಟಿಪ್ಪು ನಗರದ ಇಬ್ಬರು ಅರೆಸ್ಟ್‌, ₹5.13 ಲಕ್ಷ ಹಣ ವಶಕ್ಕೆ, ಏನಿದು ಕೇಸ್‌?

ಶಿವಮೊಗ್ಗ: ನಗರದ ಕಾಶಿಪುರ ಲಕ್ಕಪ್ಪ ಲೇಔಟ್‌ನ ಮನೆಯೊಂದರಲ್ಲಿ ನಡೆದಿದ್ದ ನಗದು ಕಳವು ಪ್ರಕರಣವನ್ನು ವಿನೋಬಾನಗರ ಪೊಲೀಸರು ಭೇದಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗದ ಟಿಪ್ಪುನಗರದ ನಿವಾಸಿಗಳಾದ ಮೊಹಮದ್ ಸಲೀಮ್ (27) ಮತ್ತು ಮೊಹಮದ್ ರಜಾಕ್ (26) ಎಂಬವವನ್ನು ಬಂಧಿಸಲಾಗಿದೆ. ಅವರಿಂದ ₹5,13,000 ನಗದು ವಶಪಡಿಸಿಕೊಳ್ಳಲಾಗಿದೆ.

ವ್ಯಾಪಾರಿ ಮನೆಯಲ್ಲಿ ಲಕ್ಷ ಲಕ್ಷ ಹಣ ಕಳವು

ಮೇ 26ರಂದು ಮಧ್ಯಾಹ್ನ ಲಕ್ಕಪ್ಪ ಲೇಔಟ್ 2ನೇ ಕ್ರಾಸ್‌ನ ನಿವಾಸಿ, ಅಡಿಕೆ ತಟ್ಟೆ ವ್ಯಾಪಾರಿ ಹೆಚ್.ಎಲ್. ಸೋಮಶೇಖರ್ ಅವರ ಮನೆಯ ಬೀರುವಿನಲ್ಲಿದ್ದ ₹7 ಲಕ್ಷ ನಗದು ಹಣ ಕಳವಾಗಿತ್ತು. ಜಮೀನು ಮಾರಾಟ ಮಾಡಿ ಮನೆಯ ನಿರ್ಮಾಣ ಕಾರ್ಯಕ್ಕಾಗಿ ಅವರು ಈ ಹಣ ಇಟ್ಟುಕೊಂಡಿದ್ದರು. ಈ ಕುರಿತು ಸೋಮಶೇಖರ್ ಅವರು ನೀಡಿದ ದೂರಿನ ಮೇರೆಗೆ ವಿನೋಬಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

Vinobanagara-Police-Arrest-two-theives-from-Tippu-Nagara.

ತನಿಖೆ ಚುರುಕು, ಆರೋಪಿಗಳು ಅರೆಸ್ಟ್‌

ಜಿಲ್ಲಾ ಪೊಲೀಸ್ ಅಧೀಕ್ಷಕ ನಿಖಿಲ್ ಬಿ. ಅವರ ಮಾರ್ಗದರ್ಶನದಲ್ಲಿ ವಿನೋಬಾನಗರದ ಇನ್ಸ್‌ಪೆಕ್ಟರ್ ಸಂತೋಷಕುಮಾರ್ ಡಿ.ಕೆ. ಉಸ್ತುವಾರಿಯಲ್ಲಿ ಪಿಎಸ್‌ಐ ತಿರುಮಲೇಶ್ ಜಿ. ಮತ್ತು ಸಿಬ್ಬಂದಿಯನ್ನೊಳಗೊಂಡ ವಿಶೇಷ ತಂಡವು ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದೆ. ಕಾರ್ಯಾಚರಣೆಯಲ್ಲಿ ಸಿಬ್ಬಂದಿ ರಾಜು ಕೆ.ಆರ್, ಚಂದ್ರಾನಾಯ್ಕ ಬಿ, ಮಲ್ಲಪ್ಪ ಎಸ್.ಜಿ, ಅರುಣಕುಮಾರ್ ಎನ್.ಕೆ ಮತ್ತು ಮನುಶಂಕರ ಪಾಲ್ಗೊಂಡಿದ್ದರು.

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್‌ ನಂಬರ್: 7411700200
Kalleshwara-Enterprises.webp