NEWS HIGHLIGHTS
ಶಿವಮೊಗ್ಗ: ಕಳೆದ ಕೆಲವು ದಿನಗಳಿಂದ ಜನರನ್ನು ಹೈರಾಣಾಗಿಸಿದ್ದ ಬಿಸಿಲು ಹಾಗೂ ವಿಪರೀತ ಸೆಖೆಗೆ ಸ್ವಲ್ಪ ಬ್ರೇಕ್ ಬಿದ್ದಿದೆ. ಇಂದು ಸಂಜೆ ಶಿವಮೊಗ್ಗ ನಗರ ಸೇರಿದಂತೆ ಜಿಲ್ಲೆಯ ಹಲವೆಡೆ ವರುಣನ ಸಿಂಚನವಾಗಿದೆ. ಇಂದು ಸಂಜೆ ವೇಳೆಗೆ ದಟ್ಟ ಮೋಡಗಳು ಆವರಿಸಿಕೊಂಡು, ಗುಡುಗು ಸಹಿತ ಮಳೆ ಆರಂಭವಾಗಿದೆ.
ಶಿವಮೊಗ್ಗ ಸಿಟಿಯಲ್ಲಿ ಗುಡುಗು, ಮಳೆ
ಸಂಜೆ 6 ಗಂಟೆ ಹೊತ್ತಿಗೆ ಶಿವಮೊಗ್ಗ ನಗರದಲ್ಲಿ ಜೋರು ಗಾಳಿ ಸಹಿತ ಭಾರಿ ಮಳೆ ಆರಂಭವಾಗಿದೆ. ಬಿಸಿಲಿನ ತಾಪದಿಂದ ತತ್ತರಿಸಿದ್ದ ನಗರದ ಜನತೆಗೆ ಈ ಮಳೆ ತಂಪಾದ ವಾತಾವರಣ ನಿರ್ಮಿಸಿದೆ. ನಗರದ ಪ್ರಮುಖ ರಸ್ತೆಗಳು ಹಾಗೂ ವಿವಿಧ ಬಡಾವಣೆಗಳಲ್ಲಿ ಸಂಜೆ ವೇಳೆ ಉತ್ತಮ ಮಳೆಯಾಗುತ್ತಿರುವ ವರದಿಯಾಗಿದೆ.

ಜಿಲ್ಲೆಯ ವಿವಿಧ ತಾಲೂಕುಗಳಿಗೂ ಮಳೆಯಾಗುತ್ತಿದೆ. ಹೊಸನಗರ, ಸೊರಬ ಮತ್ತು ಶಿವಮೊಗ್ಗ ತಾಲೂಕಿನ ಕೆಲವೆಡೆ ಮಳೆಯಾಗುತ್ತಿದೆ. ಮುಂಗಾರು ಮಳೆಯ ಆರಂಭದ ನಿರೀಕ್ಷೆಯಲ್ಲಿದ್ದ ರೈತಾಪಿ ವರ್ಗಕ್ಕೆ ಈ ಪೂರ್ವ ಮುಂಗಾರು ಮಳೆ ಕೊಂಚ ಸಮಾಧಾನ ತಂದಿದೆ.