ಶಿವಮೊಗ್ಗ: ನಗರದಲ್ಲಿ ಫುಟ್ಪಾತ್ ಮತ್ತು ರಸ್ತೆ ಅತಿಕ್ರಮಣ ತೆರವು ಕಾರ್ಯಾಚರಣೆ ಮುಂದುವರೆದಿದೆ. ಬಿ.ಹೆಚ್. ರಸ್ತೆಗೆ ಹೊಂದಿರಕೊಂಡಿರ ಗಾರ್ಡನ್ ಏರಿಯಾದ 1ನೇ ಕ್ರಾಸ್ನಲ್ಲಿ ಟ್ರಾಫಿಕ್ ಪೊಲೀಸರು ಕಾರ್ಯಾಚರಣೆ ನಡೆಸಿದರು.
ರಸ್ತೆ ಮೇಲೆ ಗುಜರಿ, ಟೈರ್, ಕಬ್ಬಿಣದ ವಸ್ತುಗಳು
ಈ ರಸ್ತೆಯಲ್ಲಿ ಕಬ್ಬಿಣದ ವಸ್ತುಗಳು, ಟೈರ್ಗಳು ಹಾಗೂ ಗುಜರಿ ಸಾಮಗ್ರಿಗಳನ್ನು ವ್ಯಾಪಾರಿಗಳು ಫುಟ್ ಪಾತ್ ಮತ್ತು ರಸ್ತೆಗಳ ಮೇಲೆ ಇರಿಸಿದ್ದರು. ಇದರಿಂದ ಸುಗಮ ಸಂಚಾರಕ್ಕೆ ಅಡಚಣೆಯಾಗಿತ್ತು. ಈ ಹಿನ್ನೆಲೆ ಟ್ರಾಫಿಕ್ ಪೊಲೀಸರು ಅವುಗಳನ್ನು ತೆರವುಗೊಳಿಸಿದರು.

ಇದೇ ವೇಳೆ, ರಸ್ತೆ ಮತ್ತು ಪಾದಚಾರಿ ಮಾರ್ಗಗಳಲ್ಲಿ ಯಾವುದೇ ವಸ್ತುಗಳನ್ನು ಇಡಬಾರದು ಎಂದು ಗುಜರಿ ಅಂಗಡಿ ಮಾಲೀಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಯಿತು. ಈ ನಿಯಮವನ್ನು ಮತ್ತೆ ಉಲ್ಲಂಘಿಸಿದರೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ತೆರವು ಕಾರ್ಯಾಚರಣೆ ನಿರಂತರ
ನಗರದಲ್ಲಿ ಸಂಚಾರ ಸುಧಾರಣೆಗೆ ಪೊಲೀಸರು ಸರಣಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಈ ಹಿಂದೆ ಗಾರ್ಡನ್ ಏರಿಯಾದಲ್ಲಿ ಫುಟ್ಪಾತ್ಗಳನ್ನು ಮುಕ್ತಗೊಳಿಸಲಾಗಿತ್ತು. ಅಲ್ಲದೆ ಬಸವೇಶ್ವರ ಕಾಲೇಜು ಮುಂಭಾಗದಲ್ಲಿದ್ದ ಹೂವಿನ ಅಂಗಡಿಗಳನ್ನು ತೆರವುಗೊಳಿಸಿ ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು.

