ಶಿವಮೊಗ್ಗದ ಹೊಸಮನೆಯಲ್ಲಿ ಕ್ರೇನ್‌ ದುರಂತ, ಬೆಳ್ತಂಗಡಿಯ ವ್ಯಕ್ತಿ ಸಾವು

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ
NEWS HIGHLIGHTS

ಶಿವಮೊಗ್ಗ: ತಲೆ ಮೇಲೆ ಕ್ರೇನ್ ಹರಿದು ಕಾರ್ಮಿಕರೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ನಗರದ ಹೊಸಮನೆ ಬಡಾವಣೆಯ 3ನೇ ಕ್ರಾಸ್‌ನಲ್ಲಿ ಘಟನೆ ನಡೆದಿದೆ.

➤ ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ.

ಬೆಳ್ತಂಗಡಿ ತಾಲೂಕಿನ ಉಪ್ಪಿನಂಗಡಿ ಸಮೀಪದ ಪಿಲಿಗೂಡು ಗ್ರಾಮದ ನಿವಾಸಿ ನಾಗೇಶ್ (48) ಮೃತ ದುರ್ದೈವಿ. ಹೊಸಮನೆಯಲ್ಲಿರುವ ದೊಡ್ಡಮ್ಮ ದೇವಾಲಯದ ಗೋಪುರ ನಿರ್ಮಾಣ ಕೆಲಸಕ್ಕಾಗಿ ನಾಗೇಶ್ ಅವರು ಶುಕ್ರವಾರ ಊರಿನಿಂದ ಶಿವಮೊಗ್ಗಕ್ಕೆ ಬಂದಿದ್ದರು ಎನ್ನಲಾಗಿದೆ.

Crane-Incident-at-Shimoga-Hosamane-3rd-Cross.

ಹೇಗಾಯ್ತು ಘಟನೆ?

ದೇವಾಲಯದ ಮುಂಭಾಗದಿಂದ ಕಲ್ಲುಗಳನ್ನು ಎತ್ತಿಕೊಂಡು ಕ್ರೇನ್ ರಿವರ್ಸ್ ಹೋಗುತ್ತಿತ್ತು. ಆಗ ನಾಗೇಶ್ ಅವರು ಎಡವಿ ಬಿದ್ದಿದ್ದಾರೆ. ಕ್ರೇನ್‌ನ ಮುಂಭಾಗದ ಚಕ್ರಗಳು ನಾಗೇಶ್‌ ಅವರ ಮೇಲೆ ಹರಿದಿದೆ. ತಲೆ ಮೇಲೆ ಹರಿದ್ದಿದ್ದರಿಂದ ತಲೆ ಭಾಗ ಛಿದ್ರವಾಗಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ದೊಡ್ಡಪೇಟೆ ಠಾಣೆ ಪೊಲೀಸ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.