ತೀರ್ಥಹಳ್ಳಿ ರಂಜದಕಟ್ಟೆಯ ಕಳ್ಳತನ ಕೇಸ್‌, ಹಾವೇರಿ ಜಿಲ್ಲೆಯ ಇಬ್ಬರು ಅರೆಸ್ಟ್‌, ಏನಿದು ಪ್ರಕರಣ?

ತೀರ್ಥಹಳ್ಳಿ: ಸಮೀಪದ ರಂಜದಕಟ್ಟೆಯ ಅಡಿಕೆ ವ್ಯಾಪಾರಿ ಅಶ್ರಫ್ ಅವರ ಮನೆಯಲ್ಲಿ ನಡೆದಿದ್ದ ಅಡಿಕೆ ಕಳ್ಳತನ ಪ್ರಕರಣವನ್ನು ಭೇದಿಸಿರುವ ಪೊಲೀಸರು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಸುದ್ದಿಯ ಮುಂದಿನ ಭಾಗ ಕೆಳಗಿದೆ

ಹಾವೇರಿ ಜಿಲ್ಲೆಯ ಶಿಗ್ಗಾಂವ ಮೂಲದ ಮೆಹಬೂಬ್ ಸಾಬ್ ಮತ್ತು ಖಾಸಿಂ ಸಾಬ್ ಬಂಧಿತರು. ಕಳ್ಳತನಕ್ಕೆ ಬಳಸಿದ್ದ ವಾಹನ ಹಾಗೂ ಸುಮಾರು ₹4.50 ಲಕ್ಷ ಮೌಲ್ಯದ 9 ಕ್ವಿಂಟಾಲ್ ಅಡಿಕೆ ವಶಪಡಿಸಿಕೊಳ್ಳಲಾಗಿದೆ.

Thirthahalli-Police-nab-two-areca-theives

ಮೇ 4ರಂದು ಅಶ್ರಫ್ ಅವರ ಮನೆಯಲ್ಲಿ ಕಳ್ಳತನ ನಡೆದಿತ್ತು. ಈ ಸಂಬಂಧ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪ್ರಕರಣದ ತನಿಖೆ ಕೈಗೆತ್ತಿಕೊಂಡ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಸೆರೆಹಿಡಿದಿದ್ದಾರೆ.

Shivamogga Live Promotion

ಡಿವೈಎಸ್‌ಪಿ ಅರವಿಂದ ಕಲಗುಜ್ಜಿ ಅವರ ಮಾರ್ಗದರ್ಶನದಲ್ಲಿ, ಪಿಎಸ್‌ಐ ಇಮ್ರಾನ್ ಬೇಗ್, ಸಿಬ್ಬಂದಿ ಸುಷ್ಮಾ, ಯುವರಾಜ್, ಲಿಂಗೇಗೌಡ, ಕುಮಾರ್, ಮಂಜುನಾಥ್ ಹಂಪಿಹೊಳಿ, ಪ್ರದೀಪ್, ಪ್ರಮೋದ್, ವೀರೇಂದ್ರ, ದೀಪಕ್‌, ರಾಘವೇಂದ್ರ, ಶಿವಮೊಗ್ಗ ಡಿಪಿಒ ಗುರು, ಇಂದ್ರೇಶ್‌ ಅವರನ್ನೊಳಗೊಂಡ ತಂಡ ಕಾರ್ಯಾಚರಣೆ ನಡೆಸಿದೆ.

📍 ನಿಮ್ಮೂರ ಸುದ್ದಿ
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ.