ಶಿವಮೊಗ್ಗದ 18ಕ್ಕೂ ಹೆಚ್ಚು ಗ್ರಾಮಗಳಲ್ಲಿ ಜೂನ್‌ 12ರಂದು ಇಡೀ ದಿನ ಕರೆಂಟ್‌ ಇರಲ್ಲ, ಯಾವ್ಯಾವ ಊರುಗಳು?

ಶಿವಮೊಗ್ಗ: ಗ್ರಾಮೀಣ ಮೆಸ್ಕಾಂ ಉಪವಿಭಾಗದ ಸಂತೆ ಕಡೂರು ವ್ಯಾಪ್ತಿಯಲ್ಲಿ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಆದ್ದರಿಂದ ಜೂ.12 ರಂದು ಬೆಳಗ್ಗೆ 10 ರಿಂದ ಸಂಜೆ 6 ರವರೆಗೆ ಶಿವಮೊಗ್ಗ ತಾಲೂಕಿನ ಹಲವು ಕಡೆಗಳಲ್ಲಿ ಕರೆಂಟ್‌ ಇರಲ್ಲ ಎಂದು ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಸುದ್ದಿಯ ಮುಂದಿನ ಭಾಗ ಕೆಳಗಿದೆ

##ಎಲ್ಲೆಲ್ಲಿ ಕರೆಂಟ್‌ ಇರಲ್ಲ?

ಕರೆಂಟ್‌ ಇರಲ್ಲ

ಸಂತೆ ಕಡೂರು, ಶ್ರೀರಾಮನಗರ, ರಾಂಪುರ, ಕೊರಲಹಳ್ಳಿ, ಕಾಚಿನಕಟ್ಟೆ, ಜ್ಯೋತಿನಗರ, ದೊಡ್ಡಿಬೀಳು, ವಿನಾಯಕನಗರ, ಲಕ್ಕಿನಕೊಪ್ಪ, ತೋಟದಕೆರೆ, ಹುರಳಿಹಳ್ಳಿ, ಗಣಿದಾಳು, ಉಂಬ್ಳೆಬೈಲು, ಕಣಗಲಸರ, ಮರಾಠಿ ಕ್ಯಾಂಪ್, ಸಾಲಿಗೆರೆ, ಕೈದೊಟ್ಲು, ಸಿದ್ದಮಾಜಿ ಹೊಸೂರು, ವಿಮಾನ ನಿಲ್ದಾಣ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.

Shivamogga Live Promotion

📍 ನಿಮ್ಮೂರ ಸುದ್ದಿ
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ.