ಭದ್ರಾವತಿ: ವಿದ್ಯುತ್ ಮಾರ್ಗ ನಿರ್ವಹಣೆ ಮತ್ತು ಮರಗಳ ರೆಂಬೆ ತೆರವು ಕಾಮಗಾರಿ ಹಿನ್ನೆಲೆ ಜೂ.12ರಂದು ಬೆಳಗ್ಗೆ 10ರಿಂದ ಸಂಜೆ 6ರ ವರೆಗೆ ಭದ್ರಾವತಿಯ ವಿವಿಧೆಡೆ ಕರೆಂಟ್ ಇರಲ್ಲ ಎಂದು ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಸುದ್ದಿಯ ಮುಂದಿನ ಭಾಗ ಕೆಳಗಿದೆ
ಎಲ್ಲೆಲ್ಲಿ ಕರೆಂಟ್ ಇರಲ್ಲ?
ನ್ಯೂಟೌನ್, ನ್ಯೂ ಕಾಲೋನಿ, ಹುಡ್ಕೊ ಕಾಲೋನಿ, ಹೊಸ ಬುಳ್ಳಾಪುರ, ಆಂಜನೇಯ ಅಗ್ರಹಾರ, ಕೂಲಿಬ್ಲಾಕ್ ಶೆಡ್, ಗಣೇಶ ಕಾಲೋನಿ, ಜನ್ನಾಪುರ, ಎಸ್.ಜೆ.ರಸ್ತೆ, ಎನ್‌ಟಿಬಿ ಕಚೇರಿ ಭಾಗ, ಕಮರ್ಷಿಯಲ್ ರಸ್ತೆ, ಕಿತ್ತೂರು ಚೆನ್ನಮ್ಮ ಬಡಾವಣೆ, ರಾಜಪ್ಪ ಬಡಾವಣೆ, ಹಾಲಪ್ಪ ಬಡಾವಣೆ, ಜಿಂಕ್ ಲೈನ್, ಫಿಲ್ಟರ್ ಶೆಡ್ ಸುತ್ತಮುತ್ತ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.

