ಸಾಗರ: ನಗರದ ಸುವಿಧಾ ಮಾರ್ಕೆಟ್ ರಸ್ತೆಯ ಕಾಮತ್ ಹೋಟೆಲ್ ಬಳಿ ನಿಲ್ಲಿಸಲಾಗಿದ್ದ ಹೀರೊ ಹೊಂಡಾ ಬೈಕ್ ಕಳ್ಳತನವಾಗಿದೆ. ಬರದವಳ್ಳಿ ಅಜಿತ್ ಹೋಟೆಲ್ ಬಳಿ ತಮ್ಮ ಬೈಕ್ ನಿಲ್ಲಿಸಿ ಹೋಗಿದ್ದರು. ಸ್ವಲ್ಪ ಸಮಯದ ಬಳಿಕ ವಾಪಸ್ ಬಂದು ನೋಡಿದಾಗ ಬೈಕ್ ನಾಪತ್ತೆಯಾಗಿತ್ತು ಎಂದು ಆರೋಪಿಸಿದ್ದಾರೆ. ಕಳುವಾದ ಬೈಕ್‌ನ ಮೌಲ್ಯ ₹20,000 ಎಂದು ಅಂದಾಜಿಸಲಾಗಿದೆ. ಈ ಕುರಿತು ಸಾಗರ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುದ್ದಿಯ ಮುಂದಿನ ಭಾಗ ಕೆಳಗಿದೆ
