ಮಾರುಕಟ್ಟೆ ಮಾಹಿತಿ: ಜಿಲ್ಲೆಯ ಪ್ರಮುಖ ಮಾರುಕಟ್ಟೆಗಳಲ್ಲಿ ಇಂದು ವಿವಿಧ ಮಾದರಿಯ ಅಡಿಕೆ ಧಾರಣೆ.
ಸುದ್ದಿಯ ಮುಂದಿನ ಭಾಗ ಕೆಳಗಿದೆ
ಇದನ್ನೂ ಓದಿ:➤ ಪುರುಷರಲ್ಲಿ ಪ್ರಾಸ್ಟೇಟ್ ಹಿಗ್ಗುವಿಕೆ; ನಂಜಪ್ಪ ಆಸ್ಪತ್ರೆಯಲ್ಲಿ ಉಚಿತ ತಪಾಸಣೆ, ಈಗಲೆ ಹೆಸರು ನೋಂದಣಿಗೆ ಸೂಚನೆ
ಶಿವಮೊಗ್ಗ ಮಾರುಕಟ್ಟೆ
ರಾಶಿ ಅಡಿಕೆ ಕನಿಷ್ಠ ₹48,000 ಹಾಗೂ ಗರಿಷ್ಠ ₹53,699 ರವರೆಗೆ ಮಾರಾಟವಾಗಿದೆ. ಬೆಟ್ಟೆ ಅಡಿಕೆ ಕನಿಷ್ಠ ₹49,000 ಮತ್ತು ಗರಿಷ್ಠ ₹54,909 ರವರೆಗಿನ ದರ ಪಡೆದುಕೊಂಡಿದೆ. ಇನ್ನು ಗೊರಬಲು ಅಡಿಕೆ ಕನಿಷ್ಠ ₹18,000 ದಿಂದ ಗರಿಷ್ಠ ₹31,000 ರವರೆಗೆ ಹಾಗೂ ಹೊಸ ರಾಶಿ ಮಾದರಿಯ ಅಡಿಕೆ ಕನಿಷ್ಠ ₹40,110 ರಿಂದ ಗರಿಷ್ಠ ₹49,200 ರವರೆಗೆ ವ್ಯವಹಾರ ನಡೆಸಿದೆ.

ಶಿಕಾರಿಪುರ ಮಾರುಕಟ್ಟೆ
ರಾಶಿ ಅಡಿಕೆ ಕನಿಷ್ಠ ₹38,000 ಹಾಗೂ ಗರಿಷ್ಠ ₹52,469 ರವರೆಗೆ ದರ ಪಡೆದಿದೆ. ಚಾಲಿ ಮಾದರಿಯ ಅಡಿಕೆ ಕನಿಷ್ಠ ₹22,000 ದಿಂದ ಗರಿಷ್ಠ ₹25,000 ರವರೆಗೆ ಮಾರಾಟವಾಗಿದೆ.

ಸಾಗರ ಮಾರುಕಟ್ಟೆ
ರಾಶಿ ಅಡಿಕೆ ಕನಿಷ್ಠ ₹42,099 ರಿಂದ ಗರಿಷ್ಠ ₹53,399 ರವರೆಗೆ ಮಾರಾಟವಾಗಿದೆ. ಸಿಪ್ಪೆಗೋಟು ಕನಿಷ್ಠ ₹11,199 ರಿಂದ ಗರಿಷ್ಠ ₹22,299 ರವರೆಗೆ, ಬಿಳಿಗೋಟು ಅಡಿಕೆ ಕನಿಷ್ಠ ₹22,099 ರಿಂದ ಗರಿಷ್ಠ ₹28,699 ರವರೆಗಿನ ಬೆಲೆಯಲ್ಲಿ ವಹಿವಾಟು ನಡೆಸಿದೆ.