ಶಿವಮೊಗ್ಗ ಸೇರಿ ಐದು ಮಾರುಕಟ್ಟೆಗಳಲ್ಲಿ ಇವತ್ತಿನ ಅಡಿಕೆ ಧಾರಣೆ, ಎಲ್ಲೆಲ್ಲಿ ಎಷ್ಟಿದೆ ರೇಟ್?

ಮಾರುಕಟ್ಟೆ ಮಾಹಿತಿ: ಶಿವಮೊಗ್ಗ, ಸಾಗರ, ತೀರ್ಥಹಳ್ಳಿ, ಭದ್ರಾವತಿ, ಶಿಕಾರಿಪುರ ಮಾರುಕಟ್ಟೆಗಳಲ್ಲಿ ಇವತ್ತಿನ ಅಡಿಕೆ ಧಾರಣೆ (Adike Rate).

ಸುದ್ದಿಯ ಮುಂದಿನ ಭಾಗ ಕೆಳಗಿದೆ

ಶಿವಮೊಗ್ಗ ಮಾರುಕಟ್ಟೆ

ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ (APMC) ಸರಕು ಅಡಿಕೆ ಪ್ರತಿ ಕ್ವಿಂಟಲ್‌ಗೆ ಕನಿಷ್ಠ ₹60,199 ಹಾಗೂ ಗರಿಷ್ಠ ₹86,696 ರವರೆಗೆ ಮಾರಾಟವಾಗಿದೆ. ಬೆಟ್ಟೆ ಅಡಿಕೆ ಕನಿಷ್ಠ ₹52,399 ಮತ್ತು ಗರಿಷ್ಠ ₹62,300, ರಾಶಿ ಇಡಿ ಅಡಿಕೆ ಕನಿಷ್ಠ ₹45,149 ಮತ್ತು ಗರಿಷ್ಠ ₹54,599 ಹಾಗೂ ಗೊರಬಲು ಅಡಿಕೆ ಕನಿಷ್ಠ ₹19,499 ರಿಂದ ಗರಿಷ್ಠ ₹41,311 ರವರೆಗೆ ಧಾರಣೆ ಪಡೆದಿದೆ.

Adike-Rate-Areca-Nut-Price-in-Shimoga-Market- ಅಡಿಕೆ ರೇಟ್‌ - ಅಡಿಕೆ ಧಾರಣೆ

ಸಾಗರ ಮಾರುಕಟ್ಟೆ

ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಪ್ರತಿ ಕ್ವಿಂಟಲ್‌ಗೆ ಕನಿಷ್ಠ ₹38,500 ಹಾಗೂ ಗರಿಷ್ಠ ₹59,270 ರವರೆಗೆ ಮಾರಾಟವಾಗಿದೆ. ಚಾಲಿ ಅಡಿಕೆ ಕನಿಷ್ಠ ₹30,022 ಮತ್ತು ಗರಿಷ್ಠ ₹41,619, ಕೆಂಪುಗೋಟು ಅಡಿಕೆ ಕನಿಷ್ಠ ₹26,699 ಮತ್ತು ಗರಿಷ್ಠ ₹40,189, ಕೋಕ ಅಡಿಕೆ ಕನಿಷ್ಠ ₹10,299 ಮತ್ತು ಗರಿಷ್ಠ ₹35,101, ಬಿಳಿ ಗೋಟು ಅಡಿಕೆ ಕನಿಷ್ಠ ₹20,022 ಮತ್ತು ಗರಿಷ್ಠ ₹34,099 ಹಾಗೂ ಸಿಪ್ಪೆಗೋಟು ಅಡಿಕೆ ಕನಿಷ್ಠ ₹9,699 ರಿಂದ ಗರಿಷ್ಠ ₹22,089 ರವರೆಗೆ ಧಾರಣೆ ಪಡೆದುಕೊಂಡಿದೆ.

Nanjappa Hospital Advertisement

ತೀರ್ಥಹಳ್ಳಿ ಮಾರುಕಟ್ಟೆ

ತೀರ್ಥಹಳ್ಳಿ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಪ್ರತಿ ಕ್ವಿಂಟಲ್‌ಗೆ ಕನಿಷ್ಠ ₹49,633 ಹಾಗೂ ಗರಿಷ್ಠ ₹51,343 ರಂತೆ ಮಾರಾಟವಾಗಿದೆ. ಗೊರಬಲು ಅಡಿಕೆ ಕನಿಷ್ಠ ಮತ್ತು ಗರಿಷ್ಠ ₹37,500 ದರ ಪಡೆದಿದೆ. ಇತರೆ ತಳಿಗಳು ಕನಿಷ್ಠ ₹28,000 ರಿಂದ ಗರಿಷ್ಠ ₹31,405 ಹಾಗೂ ಸಿಪ್ಪೆಗೋಟು ಕನಿಷ್ಠ ₹13,000 ರಿಂದ ಗರಿಷ್ಠ ₹14,000 ರವರೆಗೆ ಮಾರಾಟವಾಗಿದೆ.

ಭದ್ರಾವತಿ ಮಾರುಕಟ್ಟೆ

ಭದ್ರಾವತಿ ಮಾರುಕಟ್ಟೆಯಲ್ಲಿ ಇತರೆ ತಳಿಯ ಅಡಿಕೆ ಪ್ರತಿ ಕ್ವಿಂಟಲ್‌ಗೆ ಕನಿಷ್ಠ ₹51,253 ಹಾಗೂ ಗರಿಷ್ಠ ₹51,253 ದರ ಪಡೆದಿದೆ.

ಶಿಕಾರಿಪುರ ಮಾರುಕಟ್ಟೆ

ಶಿಕಾರಿಪುರ ಮಾರುಕಟ್ಟೆಯಲ್ಲಿ ರಾಶಿ ಅಡಿಕೆಯು ಪ್ರತಿ ಕ್ವಿಂಟಲ್‌ಗೆ ಕನಿಷ್ಠ ₹21,941 ಹಾಗೂ ಗರಿಷ್ಠ ₹21,941 ರ ಸ್ಥಿರ ದರದಲ್ಲಿ ಮಾರಾಟವಾಗಿದೆ.

📍 ನಿಮ್ಮೂರ ಸುದ್ದಿ
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ.
Shivamogga Live Promotion