ಮಾರುಕಟ್ಟೆ ಮಾಹಿತಿ: ಶಿವಮೊಗ್ಗ, ಶಿಕಾರಿಪುರ, ತೀರ್ಥಹಳ್ಳಿ, ಸಾಗರ ಮಾರುಕಟ್ಟೆಗಳಲ್ಲಿ ಇಂದಿನ ಅಡಿಕೆ ಧಾರಣೆ (Adike Rate)
ಶಿವಮೊಗ್ಗ ಮಾರುಕಟ್ಟೆ
ಸರಕು ಅಡಿಕೆಗೆ ಕನಿಷ್ಠ ₹57,709 ಹಾಗೂ ಗರಿಷ್ಠ ₹93,996 ಧಾರಣೆ ಲಭಿಸಿದೆ. ಬೆಟ್ಟೆ ಅಡಿಕೆ ಕನಿಷ್ಠ ₹55,014 ಮತ್ತು ಗರಿಷ್ಠ ₹61,389ಕ್ಕೆ ಮಾರಾಟವಾಗಿದೆ. ಇನ್ನು ರಾಶಿ ಇಡಿ ಅಡಿಕೆ ಕನಿಷ್ಠ ₹48,089 ಹಾಗೂ ಗರಿಷ್ಠ ₹54,099 ಹಾಗೂ ಗೊರಬಲು ಅಡಿಕೆ ಕನಿಷ್ಠ ₹19,001 ಮತ್ತು ಗರಿಷ್ಠ ₹43,299ರ ವರೆಗೆ ವ್ಯವಹಾರ ನಡೆಸಿದೆ.

ಸಾಗರ ಮಾರುಕಟ್ಟೆ
ಕೆಂಪುಗೋಟು ಅಡಿಕೆ ಕನಿಷ್ಠ ₹34,699 ಹಾಗೂ ಗರಿಷ್ಠ ₹38,599ಕ್ಕೆ ಮಾರಾಟವಾಗಿದೆ. ಚಾಲಿ ಅಡಿಕೆ ಕನಿಷ್ಠ ₹39,498 ಮತ್ತು ಗರಿಷ್ಠ ₹40,111 ಧಾರಣೆ ಪಡೆದಿದೆ. ಬಿಳಿ ಗೋಟು ಅಡಿಕೆ ಕನಿಷ್ಠ ಹಾಗೂ ಗರಿಷ್ಠ ₹32,555ರಲ್ಲಿ ಸ್ಥಿರವಾಗಿತ್ತು. ರಾಶಿ ಅಡಿಕೆ ಕನಿಷ್ಠ ₹46,889 ಹಾಗೂ ಗರಿಷ್ಠ ₹48,999ರ ವರೆಗೆ ಮಾರಾಟವಾದರೆ, ಸಿಪ್ಪೆಗೋಟು ಅಡಿಕೆ ಕನಿಷ್ಠ ₹10,300ರಿಂದ ಗರಿಷ್ಠ ₹22,109ರ ವರೆಗೆ ಹರಾಜಾಗಿದೆ.
ತೀರ್ಥಹಳ್ಳಿ ಮಾರುಕಟ್ಟೆ
ಗೊರಬಲು ಅಡಿಕೆಗೆ ಕನಿಷ್ಠ ₹22,000 ಹಾಗೂ ಗರಿಷ್ಠ ₹29,767 ಧಾರಣೆ ಸಿಕ್ಕಿದೆ. ಸಿಪ್ಪೆಗೋಟು ಅಡಿಕೆ ಕನಿಷ್ಠ ಹಾಗೂ ಗರಿಷ್ಠ ₹14,000ರಲ್ಲಿ ವಹಿವಾಟು ಮುಗಿಸಿದೆ.
ಭದ್ರಾವತಿ ಮಾರುಕಟ್ಟೆ
ಭದ್ರಾವತಿ ಮಾರುಕಟ್ಟೆಯಲ್ಲಿ ಇತರೆ ತಳಿಯ ಅಡಿಕೆ ಕನಿಷ್ಠ ₹49,962 ಹಾಗೂ ಗರಿಷ್ಠ ₹52,462ರ ವರೆಗೆ ಮಾರಾಟವಾಗಿದೆ.
ಶಿಕಾರಿಪುರ ಮಾರುಕಟ್ಟೆ
ಶಿಕಾರಿಪುರ ಮಾರುಕಟ್ಟೆಯಲ್ಲಿ ರಾಶಿ ಅಡಿಕೆಯು ಕನಿಷ್ಠ ಹಾಗೂ ಗರಿಷ್ಠ ₹21,300ರಲ್ಲಿ ವ್ಯಾಪಾರವಾಗಿದೆ.

