ಶಿವಮೊಗ್ಗ ಜಿಲ್ಲೆಯ ಮೂರು ತಾಲೂಕುಗಳಲ್ಲಿ 0 ಮಿ.ಮೀ ಮಳೆ, ಅರ್ಧ ತಿಂಗಳಾದರು ಅಬ್ಬರಿಸಿದ ಮುಂಗಾರು

ಶಿವಮೊಗ್ಗ: ಜಿಲ್ಲೆಯಲ್ಲಿ ಮುಂಗಾರು ಆರಂಭವಾಗಿ ಅರ್ಧ ತಿಂಗಳು ಕಳೆಯುತ್ತಾ ಬಂದಿದ್ದರೂ ನಿರೀಕ್ಷಿತ ಮಳೆಯಾಗಿಲ್ಲ. ಬಿಸಿಲಿನ ಅಬ್ಬರ ಮುಂದುವರಿದಿದೆ.

ಸುದ್ದಿಯ ಮುಂದಿನ ಭಾಗ ಕೆಳಗಿದೆ

ಕಳೆದ 24 ಗಂಟೆಯಲ್ಲಿ ಎಷ್ಟು ಮಳೆಯಾಗಿದೆ?

ಕಳೆದ 24 ಗಂಟೆಯಲ್ಲಿ ಶಿವಮೊಗ್ಗ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಅತ್ಯಲ್ಪ ಪ್ರಮಾಣದ ಮಳೆಯಾಗಿದೆ. ಶಿವಮೊಗ್ಗ, ಶಿಕಾರಿಪುರ ಹಾಗೂ ಸೊರಬ ತಾಲೂಕುಗಳಲ್ಲಿ ಸಂಪೂರ್ಣ ಒಣಹವೆ ಮುಂದುವರಿದಿದ್ದು, ಮಳೆ ಆಗಿಲ್ಲ. ಉಳಿದಂತೆ ಭದ್ರಾವತಿಯಲ್ಲಿ 0.40 ಮಿ.ಮೀ, ತೀರ್ಥಹಳ್ಳಿಯಲ್ಲಿ 0.50 ಮಿ.ಮೀ, ಸಾಗರದಲ್ಲಿ 0.20 ಮಿ.ಮೀ ಮತ್ತು ಹೊಸನಗರದಲ್ಲಿ ಕೇವಲ 0.10 ಮಿ.ಮೀ ಮಳೆಯಾಗಿದೆ. ಇಡೀ ಜಿಲ್ಲೆಯಲ್ಲಿ ಕಳೆದ 24 ಗಂಟೆಯಲ್ಲಿ ದಾಖಲಾದ ಒಟ್ಟು ಮಳೆ ಕೇವಲ 1.20 ಮಿ.ಮೀ ಮಾತ್ರ.

People-hold-and-walks-in-Rain-at-Shimoga

ವಾಡಿಕೆಗಿಂತಲು ಅತಿ ಕಡಿಮೆ ಮಳೆ

ಜೂನ್ 16ರವರೆಗಿನ ಒಟ್ಟು ವಾಡಿಕೆ ಮಳೆಯ ಪ್ರಮಾಣ 2356.80 ಮಿ.ಮೀ ಆಗಿರಬೇಕಿತ್ತು. ಆದರೆ ಜಿಲ್ಲೆಯಲ್ಲಿ ಕೇವಲ 491.20 ಮಿ.ಮೀ ಮಳೆಯಷ್ಟೇ ದಾಖಲಾಗಿದೆ. ಅಂದರೆ ವಾಡಿಕೆಯ ಕಾಲು ಭಾಗದಷ್ಟೂ ಮಳೆ ಸುರಿದಿಲ್ಲ.

Nanjappa Hospital Advertisement

ಜಿಲ್ಲೆಯಲ್ಲೇ ಅತಿ ಹೆಚ್ಚು ಮಳೆ ಬೀಳುವ ಪ್ರದೇಶಗಳಾದ ಹೊಸನಗರ ಮತ್ತು ತೀರ್ಥಹಳ್ಳಿಯಲ್ಲಿ ಪರಿಸ್ಥಿತಿ ತೀರಾ ಕಳವಳಕಾರಿಯಾಗಿದೆ. ಹೊಸನಗರ ತಾಲೂಕಿನಲ್ಲಿ ಈ ವೇಳೆಗೆ ಬರೋಬ್ಬರಿ 661 ಮಿ.ಮೀ ವಾಡಿಕೆ ಮಳೆಯಾಗಬೇಕಿತ್ತಾದರೂ, ಪ್ರಸ್ತುತ ಬಿದ್ದಿರುವುದು ಕೇವಲ 117.00 ಮಿ.ಮೀ ಮಾತ್ರ. ಹಾಗೆಯೇ, 564.80 ಮಿ.ಮೀ ವಾಡಿಕೆ ಮಳೆ ಹೊಂದಿರುವ ತೀರ್ಥಹಳ್ಳಿಯಲ್ಲಿ ಕೇವಲ 78.60 ಮಿ.ಮೀ ಮಳೆಯಾಗಿದೆ.

ಇನ್ನುಳಿದಂತೆ ಭಾರಿ ಮಳೆಯ ನಿರೀಕ್ಷೆಯಲ್ಲಿದ್ದ ಸಾಗರ ತಾಲ್ಲೂಕಿನಲ್ಲಿ 490.90 ಮಿ.ಮೀ ವಾಡಿಕೆ ಮಳೆಯ ಎದುರು 146.10 ಮಿ.ಮೀ ನಷ್ಟು ಸಾಧಾರಣ ಮಳೆಯಾಗಿದೆ. ಶಿವಮೊಗ್ಗ ತಾಲೂಕಿನಲ್ಲಿ 111.60 ಮಿ.ಮೀ ವಾಡಿಕೆಗೆ ಪ್ರತಿಯಾಗಿ 48.60 ಮಿ.ಮೀ, ಸೊರಬದಲ್ಲಿ 275.50 ಮಿ.ಮೀ ವಾಡಿಕೆ ಮಳೆ ಆಗಬೇಕಿದ್ದ ಜಾಗದಲ್ಲಿ 45.90 ಮಿ.ಮೀ, ಶಿಕಾರಿಪುರದಲ್ಲಿ 145.80 ಮಿ.ಮೀ ವಾಡಿಕೆ ಎದುರು 37.60 ಮಿ.ಮೀ ಹಾಗೂ ಭದ್ರಾವತಿ ತಾಲೂಕಿನಲ್ಲಿ 107.20 ಮಿ.ಮೀ ಆಗಬೇಕಿದ್ದ ಮಳೆ ಕೇವಲ 17.40 ಮಿ.ಮೀ ಗೆ ಬಂದಿದೆ. ಮುಂಗಾರು ಕೈಕೊಟ್ಟಿರುವುದು ರೈತಾಪಿ ವಲಯದಲ್ಲಿ ಆತಂಕ ಮೂಡಿಸಿದೆ.

📍 ನಿಮ್ಮೂರ ಸುದ್ದಿ
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ.
Shivamogga Live Promotion