ಶಿವಮೊಗ್ಗ: ಸಾರ್ವಜನಿಕ ಸ್ಥಳದಲ್ಲಿ ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆ ನಡೆಸಿದ ಬಳಿಕ ಬಂಧಿಸಲಾಗಿದೆ. ಬಂಧಿತನನ್ನು ಆಯೂಬ್ ಪಾಷಾ (27) ಎಂದು ಗುರುತಿಸಲಾಗಿದೆ.
ಸುದ್ದಿಯ ಮುಂದಿನ ಭಾಗ ಕೆಳಗಿದೆ
ಇದನ್ನೂ ಓದಿ:➤ ಕೋರ್ಟ್ ಮೊರೆ ಹೋದ ಟೆಲಿಗ್ರಾಂ ಆ್ಯಪ್, ಕೇಂದ್ರ ಸರ್ಕಾರದ ಸಮರ್ಥನೆ ಏನು? ಟೆಲಿಗ್ರಾಂ ಸಂಸ್ಥೆ ಹೇಳಿದ್ದೇನು?
ಅಣ್ಣಾನಗರ ಚಾನಲ್ ಹತ್ತಿರ ವ್ಯಕ್ತಿಯೊಬ್ಬ ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದ. ದೊಡ್ಡಪೇಟೆ ಠಾಣೆಯ ಹೆಡ್ ಕಾನ್ಸ್ಟೇಬಲ್ ಸಂದೀಪ ಮತ್ತು ಸಿಬ್ಬಂದಿ ಆತನ ವಿಚಾರಣೆ ನಡೆಸಿದರು. ಗಾಂಜಾ ಸೇವಿಸಿರುವ ಅನುಮಾನದ ಮೇರೆಗೆ ಆರೋಪಿಯನ್ನು ವಶಕ್ಕೆ ಪಡೆದು, ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆಗೆ ಒಳಪಡಿಸಿದ್ದರು.

ಗಾಂಜಾ ಸೇವಿಸಿರುವುದು ದೃಢಪಟ್ಟ ಹಿನ್ನೆಲೆ ಆಯೂಬ್ ಪಾಷಾನನ್ನು ಬಂಧಿಸಿದ್ದಾರೆ. ಘಟನೆ ಸಂಬಂದ ಆಯೂಬ್ ಪಾಷಾ ವಿರುದ್ಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ NDPS ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

