ಅರಣ್ಯ ಅಧಿಕಾರಿಗಳ ದಾಳಿ, ಕಾಡು ಬೆಕ್ಕಿನ ಮಾಂಸ, ಬಂದೂಕು, ಗುಂಡುಗಳು ಸಹಿತ ಆರೋಪಿ ವಶಕ್ಕೆ

ಸೊರಬ: ತಾಲೂಕಿನ ಆನವಟ್ಟಿ ಅರಣ್ಯ ವಲಯ ವ್ಯಾಪ್ತಿಯಲ್ಲಿ ಪರವಾನಗಿ ರಹಿತ ಒಂಟಿ ಕೊಳವೆಯ ನಾಡಬಂದೂಕು ಬಳಸಿ ಕಾಡುಬೆಕ್ಕನ್ನು ಬೇಟೆಯಾಡಿ, ಅದರ ಮಾಂಸವನ್ನು ಬೇಯಿಸುತ್ತಿದ್ದ ವಸತಿ ಗೃಹದ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.➤ ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ.

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ಸೊರಬ ತಾಲೂಕಿನ ಕುಪ್ಪಗಡ್ಡೆ ಹೋಬಳಿಯ ತೆಕ್ಕೂರಿನ ಷಣ್ಮುಖ (48) ಬಂಧಿತ. ಖಚಿತ ಮಾಹಿತಿ ಮೇರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಈತನ ಮನೆ ಮೇಲೆ ದಾಳಿ ನಡೆಸಿದ್ದರು. ದಾಳಿಯ ಸಂದರ್ಭ ಆರೋಪಿಯಿಂದ ಬೇಟೆಯಾಡಲು ಬಳಸಿದ್ದ ಒಂದು ಸಿಂಗಲ್‌ ಬ್ಯಾರೆಲ್‌ ನಾಡಬಂದೂಕು, 12 ಸೀಸದ ಗುಂಡುಗಳು, ಬಂದೂಕಿಗೆ ಬಳಸುವ 4 ತಾಮ್ರದ ಕ್ಯಾಪ್‌ಗಳು ಹಾಗೂ 1 ಚರ್ಮದ ಬ್ಯಾಗ್ ವಶಪಡಿಸಿಕೊಳ್ಳಲಾಗಿದೆ.

ANAVATTI-NEWS-GRAPHICS-BY-SHIVAMOGGA-LIVE.

ಇದಲ್ಲದೆ ಕಾಡು ಬೆಕ್ಕಿನ್ನು ಬೇಟೆಯಾಡಿ ಸಿದ್ಧಪಡಿಸಲಾಗಿದ್ದ ಸುಮಾರು 800 ಗ್ರಾಂ ಮಾಂಸವನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಈ ಸಂಬಂಧ ಆನವಟ್ಟಿ ವಲಯ ಅರಣ್ಯಾಧಿಕಾರಿಗಳು ನೀಡಿದ ದೂರಿನ ಮೇರೆಗೆ ಆನವಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.