ಆನಂದಪುರದ ಮಾರಿಕಾಂಬ ದೇವಸ್ಥಾನದಲ್ಲಿ ಕಾಣಿಕೆ ಹಣ ಕಳ್ಳತನ, ಹೇಗಾಯ್ತು ಘಟನೆ?

ಆನಂದಪುರ: ಇಲ್ಲಿನ ಶ್ರೀ ಕಡ್ಲೆಹಕ್ಲು ಮಾರಿಕಾಂಬ ದೇವಸ್ಥಾನದ ಮುಂಭಾಗದ ಬಾಗಿಲು ಹಾಗೂ ಕಾಣಿಕೆ ಹುಂಡಿಯ ಬೀಗ ಒಡೆದು ಸುಮಾರು ₹12,000 ನಗದು ಕಳ್ಳತನ ಮಾಡಿರುವ ಘಟನೆ ನಡೆದಿದೆ. ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ.

ದೇವಸ್ಥಾನದ ಅರ್ಚಕ ಸುಧಾಕರ ಭಟ್ ಮತ್ತು ಸುಂದರೇಶ ಭಟ್ ಅವರು ಎಂದಿನಂತೆ ಪೂಜೆಗೆ ಬಂದಾಗ ಬೀಗ ಒಡೆದಿರುವುದು ಕಂಡುಬಂದಿದೆ. ತಕ್ಷಣ ಅವರು ದೇವಸ್ಥಾನದ ಸಮಿತಿ ಅಧ್ಯಕ್ಷ ಎಲ್.ಎಸ್. ವೆಂಕಟೇಶ್ ಅವರಿಗೆ ಮಾಹಿತಿ ನೀಡಿದ್ದಾರೆ. ಸಮಿತಿ ಸದಸ್ಯರು ಸ್ಥಳಕ್ಕೆ ಬಂದು ಪರಿಶೀಲಿಸಿದಾಗ ಹುಂಡಿಯಲ್ಲಿದ್ದ ಕಾಣಿಕ ಹಣ ಕಳುವಾಗಿರುವುದು ಬೆಳಕಿಗೆ ಬಂದಿದೆ.

ANANDAPURA-NEWS-GRAPHICS-BY-SHIVAMOGGA-LIVE

ಘಟನೆ ಕುರಿತು ದೇವಸ್ಥಾನದ ಅಧ್ಯಕ್ಷ ಎಲ್.ಎಸ್. ವೆಂಕಟೇಶ್ ನೀಡಿದ ದೂರಿನ ಮೇರೆಗೆ ಆನಂದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

📍 ನಿಮ್ಮೂರ ಸುದ್ದಿ
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ.

Shivamogga Live Promotion