ಮದ್ಯ ಸೇವಿಸಿ, ಊಟ ಮಾಡಿ ಬಿಲ್‌ ಕೊಡುವ ವಿಚಾರದಲ್ಲಿ ಕಿರಿಕ್‌, ಹೊಟೇಲ್‌ ಗ್ಲಾಸ್‌ ಪೀಸ್‌ ಪೀಸ್‌

ಶಿಕಾರಿಪುರ: ಮದ್ಯ ಮತ್ತು ಊಟದ ಬಿಲ್ ಪಾವತಿಸುವ ವಿಚಾರದಲ್ಲಿ ಗಿರಾಕಿಗಳು ಹಾಗೂ ಹೋಟೆಲ್ ಸಿಬ್ಬಂದಿ ನಡುವೆ ಗಲಾಟೆ ನಡೆದು, ಹೋಟೆಲ್‌ನ ಮುಂಭಾಗದ ಗ್ಲಾಸ್ ಒಡೆದು ದಾಂಧಲೆ ನಡೆಸಿರುವ ಘಟನೆ ಇಲ್ಲಿನ ಎಸ್‌ಎಸ್ ರಸ್ತೆಯ ಕಾನೂರು ಇಂಟರ್ನ್ಯಾಷನಲ್ ಹೋಟೆಲ್‌ನಲ್ಲಿ ಸಂಭವಿಸಿದೆ. ➤ ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ.

ಇಬ್ಬರು ವ್ಯಕ್ತಿಗಳು ಹೋಟೆಲ್‌ಗೆ ಬಂದು ಮದ್ಯ ಹಾಗೂ ಊಟ ಸೇವಿಸಿದ್ದರು. ಮೊದಲ ಹಂತದ ₹2,000 ಬಿಲ್ ಅನ್ನು ಆನ್‌ಲೈನ್ ಮೂಲಕ ಪಾವತಿಸಿ ಅಲ್ಲಿಯೇ ಕುಳಿತಿದ್ದ ಅವರು, ಬಳಿಕ ಮತ್ತೊಮ್ಮೆ ₹440 ಮೌಲ್ಯದ ಮದ್ಯ ತರಿಸಿಕೊಂಡಿದ್ದರು. ಕುಡಿದ ನಂತರ ಒಬ್ಬಾತ ಹೊರಗೆ ಹೋಗಿದ್ದು, ಟೇಬಲ್ ಬಳಿ ಇದ್ದ ಮತ್ತೊಬ್ಬನಿಗೆ ಬಿಲ್ ಕೇಳಿದಾಗ ಹೊರಗೆ ಹೋದ ತನ್ನ ಸ್ನೇಹಿತ ಹಣ ನೀಡುತ್ತಾನೆ ಎಂದಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ.  

Shikaripura-Town-Police-Station

ರಾತ್ರಿ 8:20ರ ಸುಮಾರಿಗೆ ಹೋಟೆಲ್ ಮಾಲೀಕ ಹಾಗೂ ಸರ್ವರ್ ಸೇರಿ ಹೊರಗೆ ಹೋಗಿದ್ದ ವ್ಯಕ್ತಿಯನ್ನು ಕರೆತಂದು ಬಿಲ್ ಪಾವತಿಸುವಂತೆ ಕೇಳಿದ್ದಾರೆ. ಈ ವೇಳೆ ಆಕ್ರೋಶಗೊಂಡ ಇಬ್ಬರು ವ್ಯಕ್ತಿಗಳು ಹೋಟೆಲ್ ಸಿಬ್ಬಂದಿಯನ್ನು ಅಡ್ಡಗಟ್ಟಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದಾರೆ. ನಂತರ ₹440 ಹಣವನ್ನು ಆನ್‌ಲೈನ್ ಮೂಲಕ ಪಾವತಿಸಿದರೂ, ಬಿಲ್ ಕೌಂಟರ್‌ನ ಮುಂಭಾಗದ ಗ್ಲಾಸ್ ಒಡೆದು ಹಾಕಿ ನಷ್ಟ ಉಂಟುಮಾಡಿದ್ದಾರಲ್ಲದೆ, ಹೋಟೆಲ್ ಮಾಲೀಕರಿಗೆ ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ಆರೋಪಿಸಲಾಗಿದೆ.

ಹೋಟೆಲ್ ಮ್ಯಾನೇಜರ್ ರೇಣುಕಪ್ಪ ನೀಡಿದ ದೂರಿನ ಮೇರೆಗೆ ಇಬ್ಬರು ಗಿರಾಕಿಗಳ ವಿರುದ್ಧ ಶಿಕಾರಿಪುರ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

📍 ನಿಮ್ಮೂರ ಸುದ್ದಿ
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ.
ಮುಂದಿನ ಸುದ್ದಿ ಓದಿ TRENDING

ಗೃಹಲಕ್ಷ್ಮಿ, ಅನ್ನಭಾಗ್ಯ ಯೋಜನೆ, ಫಲಾನುಭವಿಗಳಿಗೆ ಮಹತ್ವದ ಸಲಹೆ, ಏನದು?