ಶರಾವತಿ ಜಲವಿದ್ಯುದಾಗಾರದಲ್ಲಿ ತಾಂತ್ರಿಕ ದೋಷ, ನೀರು ಲೀಕೇಜ್‌, ತಪ್ಪಿದ ಅನಾಹುತ, ಆಗಿದ್ದೇನು?

ಕಾರ್ಗಲ್: ಇಲ್ಲಿನ ಶರಾವತಿ ಜಲವಿದ್ಯುದಾಗಾರದ 7ನೇ ಘಟಕದ ದುರಸ್ತಿ ಕಾರ್ಯದ ವೇಳೆ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ಭಾರಿ ಪ್ರಮಾಣದ ನೀರು ಸೋರಿಕೆಯಾಗಿದೆ. ಮುಂಜಾಗ್ರತಾ ಕ್ರಮವಾಗಿ ಮೂರು ಘಟಕಗಳ ವಿದ್ಯುತ್ ಉತ್ಪಾದನೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ➤ ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ.

ಲಿಂಗನಮಕ್ಕಿ ಜಲಾಶಯದ ಶರಾವತಿ ವಿದ್ಯುದಾಗರದ 7ನೇ ಘಟಕದಲ್ಲಿ ಗುರುವಾರ ನಿರ್ವಹಣಾ ಕಾರ್ಯ ನಡೆಯುತ್ತಿತ್ತು. ಇದಕ್ಕಾಗಿ ಪೈಪ್‌ನಲ್ಲಿದ್ದ ನೀರನ್ನು ಖಾಲಿ ಮಾಡುವಾಗ, ಬೃಹತ್ ಗಾತ್ರದ ಪೆನ್‌ಸ್ಟಾಕ್ ಪೈಪ್‌ಗಳ ಡ್ರೈನ್ ವಾಲ್ವ್‌ನಲ್ಲಿ ಲೀಕೇಜ್ ಉಂಟಾಗಿ ಏಕಾಏಕಿ ನೀರು ನುಗ್ಗಿದೆ ಎನ್ನಲಾಗಿದೆ.

Water-Leakage-at-Sharavthi-hydropower-station-near-Kargal

ಇದರಿಂದ ಟರ್ಬೈನ್ ಮತ್ತು ನೆಲಮಾಳಿಗೆಯ ಸುತ್ತಮುತ್ತ ಸುಮಾರು ಒಂದೂವರೆ ಅಡಿಯಷ್ಟು ನೀರು ಶೇಖರಣೆಗೊಂಡು ಆತಂಕ ಮೂಡಿಸಿತ್ತು. ತಕ್ಷಣವೇ ಎಚ್ಚೆತ್ತ ಸಿಬ್ಬಂದಿ ಸುರಕ್ಷತೆಯ ದೃಷ್ಟಿಯಿಂದ ಚಾಲನೆಯಲ್ಲಿದ್ದ ಘಟಕ 1, 8 ಮತ್ತು 9ರ ವಿದ್ಯುತ್ ಉತ್ಪಾದನೆಯನ್ನು ನಿಲ್ಲಿಸಿದ್ದರು.

ಬಳಿಕ ಹಿರಿಯ ಅಧಿಕಾರಿಗಳು ಮತ್ತು ತಾಂತ್ರಿಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ನೀರಿನ ಹರಿವನ್ನು ತಡೆಗಟ್ಟಿದರು. ಕೆಲವೇ ನಿಮಿಷಗಳಲ್ಲಿ ಶೇಖರಣೆಯಾಗಿದ್ದ ನೀರನ್ನು ಖಾಲಿ ಮಾಡಲಾಯಿತು. ಇಡೀ ವಿದ್ಯುದಾಗರದ ಸುರಕ್ಷತೆ ಪರಿಶೀಲಿಸಿದ ಬಳಿಕ ಸಂಜೆ ವೇಳೆಗೆ ಹಂತ ಹಂತವಾಗಿ ಎಲ್ಲಾ ಘಟಕಗಳನ್ನು ಪುನಃ ಚಾಲನೆಗೊಳಿಸಲಾಯಿತು.

📍 ನಿಮ್ಮೂರ ಸುದ್ದಿ
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ.
ಮುಂದಿನ ಸುದ್ದಿ ಓದಿ TRENDING

ತ್ಯಾಗರ್ತಿ ಬಂದ್‌ಗೆ ದಿನಾಂಕ ಪ್ರಕಟ, ಕಾರಣವೇನು?