ಇಂದು ಸಾಗರ ಬಂದ್‌: ಬೀದಿಗಿಳಿದ ರೈತ ಸಂಘಟನೆ, ಹೇಗಿದೆ ಬಂದ್‌ಗೆ ಪ್ರತಿಕ್ರಿಯೆ?

ಸಾಗರ: ವಿದ್ಯುತ್ ಪ್ರಸರಣ ವ್ಯವಸ್ಥೆಯನ್ನು ಖಾಸಗೀಕರಣಗೊಳಿಸುತ್ತಿರುವ ರಾಜ್ಯ ಸರ್ಕಾರದ ಕ್ರಮವನ್ನು ವಿರೋಧಿಸಿ ವಿವಿಧ ಸಂಘಟನೆಗಳು ಹಾಗೂ ಸಾರ್ವಜನಿಕರ ನೇತೃತ್ವದಲ್ಲಿ ಇಂದು ಸಾಗರ ನಗರ ಬಂದ್‌ಗೆ ಕರೆ ನೀಡಲಾಗಿದೆ. ➤ ಸುದ್ದಿಯ ಮುಂದಿನ 4 ಪ್ಯಾರಾಗಳು ಕೆಳಗಿವೆ.

ಅಂಗಡಿ ಮುಂಗಟ್ಟು ಬಂದ್‌

ಸಾಗರ ಬಂದ್‌ ಹಿನ್ನೆಲೆ ರೈತರ ಸಂಘಟನೆಗಳ ಪ್ರಮುಖರು ಇಂದು ಬೆಳಗ್ಗೆಯಿಂದಲೇ ಸಾಗರ ಪಟ್ಟಣದ ಬೀದಿಗಿಳಿದು ಬಂದ್‌ಗೆ ಬೆಂಬಲ ನೀಡುವಂತೆ ಮನವಿ ಮಾಡುತ್ತಿದ್ದಾರೆ. ಈಗಾಗಲೇ ವರ್ತಕರ ಸಂಘಟನೆಗಳು ಸೇರಿದಂತೆ ವಿವಿಧ ಸಂಘಟನಗಳು ಬಂದ್‌ಗೆ ಬೆಂಬಲ ನೀಡಿವೆ. ಹಾಗಿದ್ದೂ ಇಂದು ಬೆಳಗ್ಗೆ ಕೆಲವು ಅಂಗಡಿ ಮುಂಗಟ್ಟು ತೆರದಿದ್ದವು. ಅವುಗಳ ಬಳಿ ತೆರಳಿದ ರೈತ ಮುಖಂಡರು ಬಂದ್‌ಗೆ ಬಂಬಲ ನೀಡುವಂತೆ ಮನವಿ ಮಾಡಿದರು.

Dinesh-Shiravala-led-Sagara-Bandh-Today.

‘ಸ್ವಯಂ ಪ್ರೇರಿತ ಸಾಗರ ಬಂದ್‌’

ಈ ಕುರಿತು ಪ್ರತಿಕ್ರಿಯಿಸಿರುವ ರೈತ ಸಂಘ ಹಾಗೂ ಹಸಿರು ಸೇನೆಯ ಅಧ್ಯಕ್ಷ ದಿನೇಶ್ ಶಿರವಾಳ, ‘ವಿದ್ಯುತ್ ಖಾಸಗೀಕರಣದ ವಿರುದ್ಧ ರಾಜ್ಯಾದ್ಯಂತ ವ್ಯಾಪಕ ಪ್ರತಿಭಟನೆಗಳು ನಡೆಯುತ್ತಿವೆ. ಆದರೂ ಸರ್ಕಾರ ಪ್ರತಿಕ್ರಿಯೆ ನೀಡಿಲ್ಲ. ಹೀಗಾಗಿ ಗ್ರಾಹಕರು ಮತ್ತು ಸಾರ್ವಜನಿಕರೆಲ್ಲರೂ ಸೇರಿ ಸ್ವಯಂಪ್ರೇರಿತವಾಗಿ ಇವತ್ತು ಸಾಗರ ನಗರ ಬಂದ್ ಆಚರಿಸುತ್ತಿದ್ದೇವೆ’ ಎಂದರು.

‘ಗ್ರಾಮೀಣ ಭಾಗಗಳಿಂದ ಸಾವಿರಾರು ಸಂಖ್ಯೆಯ ರೈತರು ಟ್ರ್ಯಾಕ್ಟರ್ ಮತ್ತು ಟ್ರೈಲರ್‌ಗಳ ಮೂಲಕ ಸಾಗರ ನಗರ ಪ್ರವೇಶಿಸಿ, ಉಪವಿಭಾಗಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿ ಪ್ರತಿಭಟನೆ ದಾಖಲಿಸಲಿದ್ದಾರೆ. ರಾಜ್ಯ ಸರ್ಕಾರ ಈ ಕೂಡಲೇ ಎಚ್ಚೆತ್ತುಕೊಂಡು ಕರ್ನಾಟಕದಲ್ಲಿ ವಿದ್ಯುತ್ ಪ್ರಸರಣ ವ್ಯವಸ್ಥೆಯನ್ನು ಖಾಸಗೀಕರಣ ಮಾಡುವುದಿಲ್ಲ ಎಂದು ಅಧಿಕೃತವಾಗಿ ಘೋಷಿಸಬೇಕುʼ ಎಂದು ಅವರು ಒತ್ತಾಯಿಸಿದ್ದಾರೆ.

‘ಬಂದ್‌ಗೆ ವರ್ತಕರು ಮತ್ತು ಅಂಗಡಿ ಮಾಲೀಕರು ಸ್ವಯಂಪ್ರೇರಿತವಾಗಿ ಬೆಂಬಲ ಸೂಚಿಸಿದ್ದಾರೆ. ಒಂದು ವೇಳೆ ನಿಯಮ ಮೀರಿ ಅಂಗಡಿ ಮುಂಗಟ್ಟುಗಳನ್ನು ತೆರೆದರೆ ಯಾರನ್ನೂ ಬೆದರಿಸುವುದಿಲ್ಲ, ಬದಲಿಗೆ ಅಂತಹ ವರ್ತಕರೊಂದಿಗೆ ಮುಂದಿನ ದಿನಗಳಲ್ಲಿ ರೈತರು ಯಾವುದೇ ವ್ಯಾಪಾರ ವಹಿವಾಟು ನಡೆಸುವುದಿಲ್ಲ’ ಎಂದು ದಿನೇಶ್‌ ಶಿರವಾಳ ಎಚ್ಚರಿಸಿದರು.

ಶಿವಮೊಗ್ಗ JNNCE ಕಾಲೇಜಿನಲ್ಲಿ ADMISSION ಶುರು
JNNCE College Admission 2026
📍 ನಿಮ್ಮೂರ ಸುದ್ದಿ
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ.

ಶಿವಮೊಗ್ಗ ಲೈವ್ ಅಪ್ಡೇಟ್ಸ್

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮ ವಾಟ್ಸಪ್ ಗ್ರೂಪ್ ಸೇರಿರಿ!