ಆನಂದಪುರ ಠಾಣೆಯಲ್ಲಿ ಶಿವಮೊಗ್ಗದ ಟಿಪ್ಪು ನಗರದ ಸೋನು ಅರೆಸ್ಟ್‌, ಏನಿದು ಕೇಸ್‌?

ಸಾಗರ: ತಾಲೂಕಿನ ಆಚಾಪುರ ಗ್ರಾಮದಲ್ಲಿ ಕಳೆದ ಫೆಬ್ರವರಿಯಲ್ಲಿ ನಡೆದಿದ್ದ ಟೈರ್ ಮತ್ತು ರಿಮ್‌ಗಳ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಆನಂದಪುರ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿ, ₹45,000 ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಟಿಪ್ಪು ನಗರ ಶಿವಮೊಗ್ಗ ನಿವಾಸಿ ಸೋನು ಬಂಧಿತ ಆರೋಪಿ. (ಈ ಸುದ್ದಿಯನ್ನು ಇನ್ನು 26 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

ಈತ ಫೆಬ್ರವರಿ 6ರಂದು ರಾತ್ರಿ ಆಚಾಪುರ ಗ್ರಾಮದಲ್ಲಿ 3 ಟೈರ್ ಹಾಗೂ ರಿಮ್‌ಗಳನ್ನು ಕಳ್ಳತನ ಮಾಡಿದ್ದ. ಈ ಕುರಿತು ಆನಂದಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಜುಲೈ 3ರಂದು ಆರೋಪಿ ಸೋನು ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ ₹45,000 ಮೌಲ್ಯದ 3 ಟೈರ್ ಮತ್ತು ರಿಮ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಗೂಗಲ್‌ನಲ್ಲಿ ಶಿವಮೊಗ್ಗ ಲೈವ್ ಸುದ್ದಿಗಳು ನಿಮಗೆ ಮೊದಲು ಸಿಗಬೇಕೆ? ಕೆಳಗಿನ ಬಟನ್ ಒತ್ತಿ:

Anandapura-Police-Arrest-tippunagara-Sonu