ಶಿವಮೊಗ್ಗ: ದಿನಸಿ ಸಾಮಗ್ರಿಗಳ ಬೆಲೆ ಏರಿಕೆಯಿಂದ ಕಂಗಾಲಾಗಿರುವ ಗ್ರಾಹಕರ ಅನುಕೂಲಕ್ಕೆ ಸ್ಮಾರ್ಟ್ ಬಜಾರ್ ಮಳಿಗೆಗಳಲ್ಲಿ ತಿಂಗಳ ರೇಷನ್ ಮೇಲೆ ಭರ್ಜರಿ ಉಳಿತಾಯ ಮಾರಾಟ ಮೇಳ ಹಮ್ಮಿಕೊಳ್ಳಲಾಗಿದೆ. ದೈನಂದಿನ ಅಗತ್ಯ ವಸ್ತುಗಳ ಮೇಲೆ ರಿಯಾಯಿತಿ ಘೋಷಿಸಲಾಗಿದೆ. ಮಧ್ಯಮ ವರ್ಗದ ಕುಟುಂಬಗಳು ತಮ್ಮ ಮಾಸಿಕ ದಿನಸಿ ವೆಚ್ಚದಲ್ಲಿ ಉಳಿತಾಯ ಮಾಡಲು ಇದು ಉತ್ತಮ ಅವಕಾಶ. ➤ ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ.
ಯಾವೆಲ್ಲ ವಸ್ತುಗಳ ಮೇಲೆ ರಿಯಾಯಿತಿ?
ಮಾರಾಟ ಮೇಳದಲ್ಲಿ 26 ಕೆಜಿ ತೂಕದ ರಾಯಲ್ ಬುಲೆಟ್ ಕೋಲಂ ಅಕ್ಕಿ ಚೀಲ ₹1,399ಕ್ಕೆ ಲಭ್ಯವಿದ್ದು, ಗ್ರಾಹಕರಿಗೆ ₹501 ಉಳಿತಾಯವಾಗಲಿದೆ. ಹಾಗೆಯೇ 10 ಕೆಜಿ ತೂಕದ ಆಶೀರ್ವಾದ್ ಸುಪೀರಿಯರ್ ಎಂ.ಪಿ ಆಟ್ಟ ಚೀಲ ₹549ಕ್ಕೆ, 26 ಕೆಜಿಯ ಕ್ಲಾಸಿಕ್ ಸೋನಾ ಮಸೂರಿ ಅಕ್ಕಿ ಚೀಲ ₹1,299ಕ್ಕೆ ಹಾಗೂ 1 ಕೆಜಿ ಬಿಡಿ ಸಕ್ಕರೆ ₹44.50 ದರದಲ್ಲಿ ಸಿಗಲಿದೆ. ತೊಳೆದ ಉದ್ದಿನ ಬೇಳೆ ಪ್ರತಿ ಕೆಜಿಗೆ ₹111 ದರದಲ್ಲಿ ಮಾರಾಟವಾಗುತ್ತಿದೆ.

ಇದಲ್ಲದೆ ಆಯ್ದ ಬಿಸ್ಕೆಟ್ ಪ್ಯಾಕ್‌ಗಳು, ಸುಗಂಧ ದ್ರವ್ಯ, ಸೋಪು, ನೋಟ್ ಬುಕ್ ಹಾಗೂ ಸ್ಯಾನಿಟರಿ ಪ್ಯಾಡ್‌ಗಳ ಖರೀದಿಯ ಮೇಲೆ ಒಂದು ಕೊಂಡರೆ ಮತ್ತೊಂದು ಉಚಿತ ಕೊಡುಗೆ ನೀಡಲಾಗಿದೆ. ಈ ಕೊಡುಗೆಗಳು ಶಿವಮೊಗ್ಗ, ದಾವಣಗೆರೆ, ಹೊಸಪೇಟೆ, ಬಳ್ಳಾರಿ, ರಾಯಚೂರು, ಚಿಕ್ಕಮಗಳೂರು ಮತ್ತು ಲಿಂಗಸಗೂರು ಸ್ಮಾರ್ಟ್ ಬಜಾರ್ ಮಳಿಗೆಗಳಲ್ಲಿ ಜುಲೈ 5ರವರೆಗೆ ಮಾತ್ರ ಲಭ್ಯವಿರಲಿವೆ ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ. ಶಿವಮೊಗ್ಗದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಕಟ್ಟದಲ್ಲಿ ಸ್ಮಾರ್ಟ್ ಬಜಾರ್ ಶೋ ರೂಂ ಇದೆ.
