ಮರ ಕಡಿದು ಓಮಿನಿಗೆ ತುಂಬುವಾಗ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ

ಕುಂಸಿ: ಸಮೀಪದ ಚೋರಡಿ ವಲಯ ಅರಣ್ಯ ವ್ಯಾಪ್ತಿಯ ಗಿಳಾಲಗುಂಡಿ ಅರಣ್ಯ ಪ್ರದೇಶದಲ್ಲಿ ಸಾಗುವಾನಿ ಮರ ಕಡಿದು ಓಮಿನಿ ವಾಹನಕ್ಕೆ ತುಂಬಿಸುತ್ತಿದ್ದ ಆರೋಪಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಶುಕ್ರವಾರ ರಾತ್ರಿ ಬಂಧಿಸಿದ್ದಾರೆ. ➤ ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ.

ಆನಂದಪುರಂ ಸಮೀಪದ ಸರಗುಂದ ಗ್ರಾಮದ ಸುಧನ್ (24) ಬಂಧಿತ ಆರೋಪಿ. ಈತ ಗಿಳಾಲಗುಂಡಿ ಅರಣ್ಯದಲ್ಲಿ ಸಾಗುವಾನಿ ಮರವನ್ನು ಕಡಿದು, 6 ತುಂಡುಗಳನ್ನಾಗಿ ಕತ್ತರಿಸಿ ಓಮಿನಿ ವಾಹನದಲ್ಲಿ ತುಂಬುತ್ತಿದ್ದಾಗ ಗಸ್ತಿನಲ್ಲಿದ್ದ ಅರಣ್ಯ ಸಿಬ್ಬಂದಿ ದಾಳಿ ನಡೆಸಿದ್ದಾರೆ. ಕಾರ್ಯಾಚರಣೆ ವೇಳೆ ಕಳವಿಗೆ ಬಳಸಿದ್ದ ಓಮಿನಿ ವಾಹನ, ಮರ ಕತ್ತರಿಸುವ ಮಿಷನ್ ಗರಗಸ ಹಾಗೂ ಸಾಗುವಾನಿ ಮರದ ತುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.

KUMSI-NEWS

ಚೋರಡಿ ವಲಯ ಅರಣ್ಯಾಧಿಕಾರಿ ಗೀತಾ ವಿಠಲ್ ನಾಯ್ಕ ಅವರ ಮಾರ್ಗದರ್ಶನದಲ್ಲಿ ಡಿವೈಆರ್‌ಎಫ್‌ಒ ಚೇತನ್ ಕುಮಾರ್, ಬೀಟ್ ಫಾರೆಸ್ಟ್ ಅಧಿಕಾರಿಗಳಾದ ಪ್ರದೀಶ್, ಅಸ್ರಾರ್ ಖಾನ್, ಭೋಜಪ್ಪ ಮತ್ತು ಪ್ರವೀಣ್ ಈ ಯಶಸ್ವಿ ಕಾರ್ಯಾಚರಣೆ ನಡೆಸಿದ್ದಾರೆ.

ಶಿವಮೊಗ್ಗ JNNCE ಕಾಲೇಜಿನಲ್ಲಿ ADMISSION ಶುರು
JNNCE College Admission 2026
📍 ನಿಮ್ಮೂರ ಸುದ್ದಿ
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ.

ಶಿವಮೊಗ್ಗ ಲೈವ್ ಅಪ್ಡೇಟ್ಸ್

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮ ವಾಟ್ಸಪ್ ಗ್ರೂಪ್ ಸೇರಿರಿ!