ಮಾಣಿ, ಯಡೂರಿನಲ್ಲಿ 180 ಮಿ.ಮೀ ಮಳೆ, ಉಳಿದೆಡೆ ಎಷ್ಟಾಗಿದೆ ವರ್ಷಧಾರೆ? ಡ್ಯಾಮ್‌ಗಳ ಒಳ ಹರಿವು ಎಷ್ಟಿದೆ?

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ
NEWS HIGHLIGHTS

ಹೊಸನಗರ: ತಾಲ್ಲೂಕಿನಾದ್ಯಂತ ಮುಂಗಾರು ಮಳೆಯ ಅಬ್ಬರ ಮುಂದುವರೆದಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಮಾಣಿ, ಪಿಕ್‌ಅಪ್, ಚಕ್ರಾ ಮತ್ತು ಸಾವೇಹಕ್ಲು ಜಲಾಶಯಗಳಿಗೆ ನೀರಿನ ಒಳಹರಿವು ಹೆಚ್ಚಾಗಿದೆ.

➤ ಸುದ್ದಿಯ ಮುಂದಿನ 5 ಪ್ಯಾರಾಗಳು ಕೆಳಗಿವೆ.

ಎಲ್ಲೆಲ್ಲಿ ಎಷ್ಟು ಮಳೆಯಾಗಿದೆ?

ಕಳೆದ 24 ಗಂಟೆಗಳ ಅವಧಿಯಲ್ಲಿ ಮಾಣಿ ಹಾಗೂ ಯಡೂರು ಭಾಗದಲ್ಲಿ ತಲಾ 180 ಮಿ.ಮೀ ನಷ್ಟು ಅತ್ಯಧಿಕ ಪ್ರಮಾಣದ ಮಳೆ ಸುರಿದಿದೆ. ಇನ್ನು, ಮಾಸ್ತಿಗಟ್ಟೆಯಲ್ಲಿ 152 ಮಿ.ಮೀ, ಸಾವೇಹಕ್ಲುವಿನಲ್ಲಿ 142 ಮಿ.ಮೀ ಹಾಗೂ ಚಕ್ರಾ ಜಲಾನಯನ ಪ್ರದೇಶದಲ್ಲಿ 123 ಮಿ.ಮೀ ಮಳೆಯಾಗಿದೆ. ಹುಲಿಕಲ್ ಭಾಗದಲ್ಲಿ 145 ಮಿ.ಮೀ ಮಳೆ ದಾಖಲಾಗಿದೆ.

Maani-Dam-in-Hosanagara-Taluk

ಜಲಾಶಯಗಳಿಗೆ ಎಷ್ಟಿದೆ ಒಳ ಹರಿವು?

ಮಾಣಿ ಜಲಾಶಯ: ಜಲಾಶಯದ ಇಂದಿನ ನೀರಿನ ಮಟ್ಟ 575.64 ಮೀಟರ್ ತಲುಪಿದೆ (ಗರಿಷ್ಠ ಮಟ್ಟ: 594.36 ಮೀ). ಸದ್ಯ ಜಲಾಶಯಕ್ಕೆ 4,360 ಕ್ಯೂಸೆಕ್ ಒಳಹರಿವು ಇದೆ.

ಪಿಕ್‌ಅಪ್ ಜಲಾಶಯ: ಇಂದಿನ ಮಟ್ಟ 562.47 ಮೀಟರ್ ಆಗಿದ್ದು, 1,573 ಕ್ಯೂಸೆಕ್ ಒಳಹರಿವು ಇದೆ. ವಿದ್ಯುತ್ ಉತ್ಪಾದನೆಗಾಗಿ 1,280 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ.

ಚಕ್ರಾ ಜಲಾಶಯ: ಜಲಾಶಯದ ಮಟ್ಟ 568.24 ಮೀಟರ್ ತಲುಪಿದ್ದು, 1,635 ಕ್ಯೂಸೆಕ್ ಒಳಹರಿವು ದಾಖಲಾಗಿದೆ.

ಸಾವೇಹಕ್ಲು ಜಲಾಶಯ: ಇಂದಿನ ನೀರಿನ ಮಟ್ಟ 575.12 ಮೀಟರ್ ಆಗಿದ್ದು, ಪ್ರಸ್ತುತ 1,834 ಕ್ಯೂಸೆಕ್ ಒಳಹರಿವು ಹರಿದು ಬರುತ್ತಿದೆ.