ಹೊಸನಗರ: ತಾಲೂಕಿನಲ್ಲಿ ಮಳೆ ಮತ್ತಷ್ಟು ಬಿರುಸು ಪಡೆದಿದೆ. ಹಲವೆಡೆ ಇನ್ನೂರು ಮಿಲಿ ಮೀಟರ್‌ಗಿಂತಲೂ ಹೆಚ್ಚಿನ ಪ್ರಮಾಣದ ಮಳೆಯಾಗಿದೆ. ➤ ಸುದ್ದಿಯ ಮುಂದಿನ 5 ಪ್ಯಾರಾಗಳು ಕೆಳಗಿವೆ.
ಎಲ್ಲೆಲ್ಲಿ ಎಷ್ಟು ಮಳೆಯಾಗಿದೆ?
ಕಳೆದ 24 ಗಂಟೆಗಳ ಅವಧಿಯಲ್ಲಿ ಹುಲಿಕಲ್ ಭಾಗದಲ್ಲಿ 227 ಮಿ.ಮೀ ಮಳೆ ಸುರಿದಿದೆ. ಇನ್ನು, ಮಾನಿಯಲ್ಲಿ 211 ಮಿ.ಮೀ, ಯಡೂರಿನಲ್ಲಿ 200 ಮಿ.ಮೀ, ಮಾಸ್ತಿಕಟ್ಟೆಯಲ್ಲಿ 195 ಮಿ.ಮೀ, ಚಕ್ರಾ ಜಲಾನಯನ ಪ್ರದೇಶದಲ್ಲಿ 152 ಮಿ.ಮೀ ಹಾಗೂ ಸಾವೇಹಕ್ಲುವಿನಲ್ಲಿ 148 ಮಿ.ಮೀ ಮಳೆ ದಾಖಲಾಗಿದೆ.

ಡ್ಯಾಮ್‌ಗಳ ಒಳ ಹರಿವು ಎಷ್ಟಿದೆ?
ಮಾನಿ ಜಲಾಶಯ: ಜಲಾಶಯದ ಇಂದಿನ ನೀರಿನ ಮಟ್ಟ 577.17 ಮೀಟರ್ ತಲುಪಿದೆ (ಗರಿಷ್ಠ ಮಟ್ಟ: 594.36 ಮೀ). ಸದ್ಯ ಜಲಾಶಯಕ್ಕೆ 8,405 ಕ್ಯೂಸೆಕ್ ಒಳಹರಿವು ಇದೆ.
ಪಿಕ್‌ಅಪ್ ಜಲಾಶಯ: ಇಂದಿನ ಮಟ್ಟ 562.70 ಮೀಟರ್ ಆಗಿದ್ದು, 3,090 ಕ್ಯೂಸೆಕ್ ಒಳಹರಿವು ಇದೆ. ವಿದ್ಯುತ್ ಉತ್ಪಾದನೆಗಾಗಿ 2,451 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ.
ಚಕ್ರಾ ಜಲಾಶಯ: ಜಲಾಶಯದ ಮಟ್ಟ 570.20 ಮೀಟರ್ ತಲುಪಿದ್ದು, 4,087 ಕ್ಯೂಸೆಕ್ ಒಳಹರಿವು ದಾಖಲಾಗಿದೆ.
ಸಾವೇಹಕ್ಲು ಜಲಾಶಯ: ಇಂದಿನ ನೀರಿನ ಮಟ್ಟ 576.80 ಮೀಟರ್ ಆಗಿದ್ದು, ಪ್ರಸ್ತುತ 2,612 ಕ್ಯೂಸೆಕ್ ಒಳಹರಿವು ಇದೆ.