NEWS HIGHLIGHTS
ಶಿವಮೊಗ್ಗ: ತಾಲ್ಲೂಕಿನ ಹೊಳಲೂರು ಗ್ರಾಮದಲ್ಲಿ ಮನೆ ಮುಂದೆ ನಿಲ್ಲಿಸಿದ್ದ ದ್ವಿಚಕ್ರ ವಾಹನವನ್ನು ಕಳ್ಳತನ ಮಾಡಲಾಗಿದೆ.
ಹೊಳಲೂರು ಗ್ರಾಮದ ಆಶ್ರಯ ಕಾಲೋನಿಯ ನಿವಾಸಿ ಉಮರ್ ಫಾರೂಕ್ ಎಂಬುವವರಿಗೆ ಸೇರಿದ ಬಜಾಜ್ ಪಲ್ಸರ್ ಎನ್-160 ಬೈಕ್ ಕಳ್ಳತನವಾಗಿದೆ. ಜುಲೈ 4ರಂದು ರಾತ್ರಿ 10 ಗಂಟೆಗೆ ಕೆಲಸ ಮುಗಿಸಿಕೊಂಡು ಬಂದು ಎಂದಿನಂತೆ ತಮ್ಮ ಮನೆ ಮುಂದೆ ಬೈಕ್ ನಿಲ್ಲಿಸಿದ್ದರು. ಮರುದಿನ ದಿನ ಬೆಳಿಗ್ಗೆ 7 ಗಂಟೆ ಸುಮಾರಿಗೆ ಗಮನಿಸಿದಾಗ ವಾಹನ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ಕಳುವಾದ ಕಪ್ಪು ಬಣ್ಣದ ಬೈಕ್‌ನ ಅಂದಾಜು ಮೌಲ್ಯ ₹60 ಸಾವಿರ ಎಂದು ಅಂದಾಜಿಸಲಾಗಿದೆ. ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಗೆ ತಡವಾಗಿ ದೂರು ನೀಡಲಾಗಿದ್ದು, ಪ್ರಕರಣ ದಾಖಲಾಗಿದೆ.
