NEWS HIGHLIGHTS
ಶಿವಮೊಗ್ಗ ಜಿಲ್ಲೆಯ ಮೂರು ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ ಎಷ್ಟಿದೆ? ಇಲ್ಲಿದೆ ಕಂಪ್ಲೀಟ್ ಮಾಹಿತಿ
ಇದನ್ನೂ ಓದಿ:➤ ಕಾರು ಡಿಕ್ಕಿ, ಆರು ವರ್ಷದ ಬಾಲಕ ಸಾವು
ಜಲಾಶಯದ ಮಾಹಿತಿ: ಜಿಲ್ಲೆಯಲ್ಲಿ ಮಳೆ ಪ್ರಮಾಣ ಕಡಿಮೆ ಆಗಿದ್ದು ಜಲಾಶಯಗಳ ಒಳ ಹರಿವು ಕಡಿಮೆಯಾಗಿದೆ. ತುಂಗಾ ಜಲಾಶಯ ಈಗಾಗಲೆ ಭರ್ತಿ ಆಗಿದ್ದು, ಒಳ ಹರಿವಿನಷ್ಟೆ ಪ್ರಮಾಣದ ನೀರನ್ನು ಹೊರಗೆ ಹರಿಸಲಾಗುತ್ತಿದೆ. ಇನ್ನು, ಭದ್ರಾ, ಲಿಂಗನಮಕ್ಕಿ ಜಲಾಶಯಗಳಲ್ಲಿ ನೀರಿನ ಹೆಚ್ಚಳವಾಗಿಲ್ಲ. ನೀರಿನ ಮಟ್ಟದ ಇಂದಿನ ವರದಿ ಇಲ್ಲಿದೆ.

ಭದ್ರಾ ಜಲಾಶಯ
- ಗರಿಷ್ಠ ಮಟ್ಟ: 186 ಅಡಿ
- ಇಂದಿನ ಜಲಮಟ್ಟ: 148 ಅಡಿ 4 ಇಂಚು
- ಒಟ್ಟು ಜಲಸಾಮರ್ಥ್ಯ: 71.535 ಟಿಎಂಸಿ
- ಲಭ್ಯವಿರುವ ನೀರು: 32.982 ಟಿಎಂಸಿ
- ಒಳಹರಿವು: 2,478 ಕ್ಯೂಸೆಕ್
- ಹೊರಹರಿವು: 221 ಕ್ಯೂಸೆಕ್
ಕಳೆದ ವರ್ಷ ಇದೇ ದಿನ ನೀರಿನ ಮಟ್ಟ 178 ಅಡಿ 9 ಇಂಚು ಇತ್ತು. ಒಳಹರಿವು: 10,462 ಕ್ಯೂಸೆಕ್, ಹೊರಹರಿವು: 3,680 ಕ್ಯೂಸೆಕ್ ಇತ್ತು.
ಲಿಂಗನಮಕ್ಕಿ ಜಲಾಶಯ
- ಗರಿಷ್ಠ ಮಟ್ಟ: 1,819 ಅಡಿ
- ಇಂದಿನ ಜಲಮಟ್ಟ: 1,764.30 ಅಡಿ
- ಒಟ್ಟು ಜಲಸಾಮರ್ಥ್ಯ: 151.64 ಟಿಎಂಸಿ
- ಲಭ್ಯವಿರುವ ನೀರು: 32.45 ಟಿಎಂಸಿ (ಶೇ 21.40)
- ಒಳಹರಿವು: 14,183 ಕ್ಯೂಸೆಕ್
- ಹೊರಹರಿವು: 5,138 ಕ್ಯೂಸೆಕ್
ಕಳೆದ ವರ್ಷ ಇದೇ ದಿನ ಜಲಮಟ್ಟ 1,803.05 ಅಡಿ ಇತ್ತು.
ತುಂಗಾ ಜಲಾಶಯ
- ಗರಿಷ್ಠ ಮಟ್ಟ: 588.24 ಮೀಟರ್
- ಇಂದಿನ ಜಲಮಟ್ಟ: 588.15 ಮೀಟರ್
- ಒಟ್ಟು ಜಲಸಾಮರ್ಥ್ಯ: 3.24 ಟಿಎಂಸಿ
- ಲಭ್ಯವಿರುವ ನೀರು: 3.190 ಟಿಎಂಸಿ
- ಒಳಹರಿವು: 9,284 ಕ್ಯೂಸೆಕ್
- ಹೊರಹರಿವು: 9,666 ಕ್ಯೂಸೆಕ್
ಕಳೆದ ವರ್ಷ ಇದೇ ದಿನ ಜಲಮಟ್ಟ 588.24 ಮೀಟರ್ ಇತ್ತು. ಒಳಹರಿವು: 18,022 ಕ್ಯೂಸೆಕ್, ಹೊರಹರಿವು: 15,102 ಕ್ಯೂಸೆಕ್ ಇತ್ತು.