NEWS HIGHLIGHTS
ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯದ ಸಿಂಡಿಕೇಟ್ಗೆ ಇಬ್ಬರು ಸದಸ್ಯರನ್ನು ರಾಜ್ಯಪಾಲರು ನಾಮನಿರ್ದೇಶನ ಮಾಡಿದ್ದಾರೆ.
ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಕಾಯ್ದೆ ಅಡಿ ಈ ನೇಮಕಾತಿ ನಡೆದಿದೆ. ಮೂರು ವರ್ಷಗಳ ಅವಧಿಗೆ ನಿವೃತ್ತ ಪ್ರೊಫೆಸರ್ ಡಾ. ಪಿ.ಕೆ. ಬಸವರಾಜ ಮತ್ತು ಶಿವಮೊಗ್ಗದ ಶಿವಕುಮಾರ್ ಡಿ.ಎಸ್. ಅವರನ್ನು ಸಿಂಡಿಕೇಟ್ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ. ಇನ್ನು, ನೂತನ ಸಿಂಡಿಕೇಟ್ ಸದಸ್ಯ ಶಿವಕುಮಾರ್ ಡಿ.ಎಸ್ ಅವರಿಗೆ ವಿಧಾನ ಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ ಅಭಿನಂದನೆ ಸಲ್ಲಿಸಿದರು.

ಇದನ್ನೂ ಓದಿ:➤ ನೆಟ್ವರ್ಕ್ ಸಮಸ್ಯೆಗೆ ಶಾಶ್ವತ ಮುಕ್ತಿ, ಶಿವಮೊಗ್ಗದ 6 ಗ್ರಾಮಗಳಲ್ಲಿ ಪ್ರಯೋಗ, ಸಂಸದ ರಾಘವೇಂದ್ರ ಹೇಳಿದ್ದೇನು?