NEWS HIGHLIGHTS
ತೀರ್ಥಹಳ್ಳಿ: ಕೃಷಿಭೂಮಿಗೆ ಅಳವಡಿಸಿದ್ದ ಪಂಪ್‌ಸೆಟ್ ಎತ್ತುವ ವೇಳೆ ಆಯತಪ್ಪಿ ಕೆರೆಗೆ ಬಿದ್ದು ರೈತರೊಬ್ಬರು ಮೃತಪಟ್ಟಿರುವ ಘಟನೆ ತೀರ್ಥಹಳ್ಳಿ ತಾಲೂಕಿನಲ್ಲಿ ನಡೆದಿದೆ.
ಸಾಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಟೆಂಕಬೈಲು ಗ್ರಾಮದ ತುಂಬುಕೋಡು ನಿವಾಸಿ ಉಮೇಶ್ (43) ಮೃತಪಟ್ಟ ದುರ್ದೈವಿ. ಕೊಪ್ಪದಲ್ಲಿ ವಾಸವಿದ್ದ ಇವರು, ತಾಯಿ ವಾಸವಿರುವ ಟೆಂಕಬೈಲಿಗೆ ತೋಟದ ಕೆಲಸಕ್ಕಾಗಿ ಬಂದಿದ್ದರು.

ಜಮೀನಿನ ಬಳಿ ಕೆರೆಗೆ ಅಳವಡಿಸಿದ್ದ ಪಂಪ್‌ಸೆಟ್ ಅನ್ನು ಎತ್ತುವ ವೇಳೆ ಆಯತಪ್ಪಿ ಕೆರೆಗೆ ಬಿದ್ದಿದ್ದಾರೆ. ಅವರಿಗೆ ಈಜಲು ಬಾರದ ಕಾರಣ ನೀರಿನಲ್ಲಿ ಮುಳುಗಿ ಸಾವಿಗೀಡಾಗಿದ್ದಾರೆ ಎಂದು ತಿಳಿದುಬಂದಿದೆ. ಈ ಸಂಬಂಧ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.