NEWS HIGHLIGHTS
ಶಿವಮೊಗ್ಗ: ತುಂಗಾನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಒಂಟಿಯಾಗಿ ವಾಸವಿರುವ ವೃದ್ಧೆಯೊಬ್ಬರು ಅನಾರೋಗ್ಯದಿಂದ ಬಳಲುತ್ತಿದ್ದು, ಅವರಿಗೆ ಅನ್ನ ಸುವಿಧಾ ಯೋಜನೆಯಡಿ ಮನೆಗೆ ಪಡಿತರ ತಲುಪಿಸುವ ಕೆಲಸವನ್ನು ಪೊಲೀಸರು ಮಾಡಿದ್ದಾರೆ.
ನ್ಯಾಯಬೆಲೆ ಅಂಗಡಿಗೆ ಹೋಗಿ ಬೆರಳುಚ್ಚು ನೀಡಿ ಪಡಿತರ ಪಡೆಯಲು ವೃದ್ಧೆಗೆ ಸಾಧ್ಯವಿರಲಿಲ್ಲ. ಈ ವಿಷಯವನ್ನು ಪಿಎಸ್‌ಐ ಮಂಜಮ್ಮ ಹಾಗೂ ಬೀಟ್ ಸಿಬ್ಬಂದಿ ಚೇತನ್ ಅವರು ಆಹಾರ ಇಲಾಖೆ ನಿರೀಕ್ಷಕರ ಗಮನಕ್ಕೆ ತಂದಿದ್ದು, ಬೆರಳುಚ್ಚು ನೀಡುವ ಪ್ರಕ್ರಿಯೆಗೆ ವಿನಾಯಿತಿ ನೀಡಿ ನೇರವಾಗಿ ಪಡಿತರ ವಿತರಣೆಗೆ ಅವಕಾಶ ಮಾಡಿಕೊಡಲಾಗಿದೆ.
