ಶಿವಮೊಗ್ಗ: ಕರ್ನಾಟಕ ಕಾರ್ಯಕನಿರತರ ಪತ್ರಕರ್ತರ ಸಂಘವು ಜಿಲ್ಲೆಯ ಮೂವರು ಪತ್ರಕರ್ತರಿಗೆ ರಾಜ್ಯಮಟ್ಟದ ವಾರ್ಷಿಕ ದತ್ತಿ ಪ್ರಶಸ್ತಿ ಘೋಷಿಸಿದೆ. ಜಿ. ವಾದಿರಾಜ್ ಕಮರೂರು, ಕಣ್ಣಪ್ಪ ಹಾಗೂ ಶ್ರೀಕಾಂತ್ ಭಟ್ ಅವರಿಗೆ ಪ್ರಶಸ್ತಿ ಘೋಷಣೆಯಾಗಿದೆ.
2025ನೇ ಸಾಲಿನ ಶ್ರೀ ಎಂ. ನಾಗೇಂದ್ರರಾವ್ ದತ್ತಿ ಪ್ರಶಸ್ತಿಗೆ ಭದ್ರಾವತಿಯ ಕಣ್ಣಪ್ಪ (ಉಷಾಮಹಿ) ಹಾಗೂ ಎಸ್.ಹೆಚ್. ರಂಗಸ್ವಾಮಿ ದತ್ತಿ ಪ್ರಶಸ್ತಿಗೆ ಹೊಸದಿಗಂತ ಶಿವಮೊಗ್ಗ ಆವೃತ್ತಿಯ ಸ್ಥಾನಿಕ ಸಂಪಾದಕ ಜಿ. ವಾದಿರಾಜ್ ಕಮರೂರು ಆಯ್ಕೆಯಾಗಿದ್ದಾರೆ. ಮಿಂಚು ಶ್ರೀನಿವಾಸ್ ದತ್ತಿ ಪ್ರಶಸ್ತಿಗೆ ವಿಜಯವಾಣಿ ಪತ್ರಿಕೆಯ ಬೆಂಗಳೂರು ಮುಖ್ಯ ವರದಿಗಾರ, ಶಿವಮೊಗ್ಗ ಮೂಲದ ಶ್ರೀಕಾಂತ್ ಭಟ್ ಆಯ್ಕೆಯಾಗಿದ್ದಾರೆ.

ಜುಲೈ 25ರಂದು ಚಿಕ್ಕಮಗಳೂರಿನ ಕುವೆಂಪು ಕಲಾಮಂದಿರದಲ್ಲಿ ನಡೆಯಲಿರುವ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸಮಾರಂಭದಲ್ಲಿ ಇಂಧನ ಸಚಿವ ಕೆ.ಜೆ. ಜಾರ್ಜ್ ದತ್ತಿ ಪ್ರಶಸ್ತಿಗಳನ್ನು ಪ್ರದಾನ ಮಾಡಲಿದ್ದಾರೆ. ಪ್ರಶಸ್ತಿಯು ನಗದು ಹಾಗೂ ಪ್ರಶಸ್ತಿ ಫಲಕ ಹೊಂದಿದೆ. ಪ್ರಶಸ್ತಿಗೆ ಪುರಸ್ಕೃತರಾದ ಶಿವಮೊಗ್ಗ ಜಿಲ್ಲೆಯ ಪತ್ರಕರ್ತರಿಗೆ ಶಿವಮೊಗ್ಗ ಜಿಲ್ಲಾ ಘಟಕದ ಅಧ್ಯಕ್ಷ ವೈದ್ಯನಾಥ್, ಪ್ರಧಾನ ಕಾರ್ಯದರ್ಶಿ ಆರ್.ಎಸ್. ಹಾಲಸ್ವಾಮಿ ಹಾಗೂ ಪದಾಧಿಕಾರಿಗಳು ಅಭಿನಂದನೆ ಸಲ್ಲಿಸಿದ್ದಾರೆ.