ಶಿವಮೊಗ್ಗ: ಮಹಿಳೆಯೊಬ್ಬರು ತುಂಗಾ ನದಿಗೆ ಹಾರಿರುವ ಶಂಕೆ ಮೇರೆಗೆ ಶೋಧ ಕಾರ್ಯ ನಡೆಸಲಾಗುತ್ತಿದೆ. ತುಂಗಾ ನದಿ ರೈಲ್ವೆ ಸೇತುವೆ ಬಳಿ ಕಾರ್ಯಾಚರಣೆ ನಡೆಯುತ್ತಿದೆ.➤ ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ.
ತುಂಗಾ ನದಿ ಸೇತುವೆ ಬಳಿ ಇಂದು ಸಂಜೆ ಮಹಿಳೆಯೊಬ್ಬರು ನದಿಗೆ ಹಾರಿದ್ದಾಳೆ ಎಂದು ಹೇಳಲಾಗುತ್ತಿದೆ. ವಿಷಯ ತಿಳಿಯುತ್ತಿದ್ದಂತೆ ಕೋಟೆ ಠಾಣೆ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಶೋಧ ಕಾರ್ಯ ನಡೆಸಿದರು. ಅಗ್ನಿಶಾಮಕ ಸಿಬ್ಬಂದಿ ರಬರ್ ಬೋಟ್ ಬಳಸಿ ನದಿಯಲ್ಲಿ ಹುಡುಕಾಟ ನಡೆಸಿದರು.

ವೇಲ್, ಮೊಬೈಲ್ ಪತ್ತೆ
ತುಂಗಾ ನದಿ ದಂಡೆ ಮೇಲೆ ವೇಲ್ ಮತ್ತು ಮೊಬೈಲ್ ಫೋನ್ ಪತ್ತೆಯಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಆದರೆ ಮೊಬೈಲ್ ಫೋನ್ ಲಾಕ್ ಆಗಿದೆ. ಇನ್ನು, ಮಹಿಳೆಯು 30 ರಿಂದ 35 ವರ್ಷ ವಯಸ್ಸಿನವರು ಎಂದು ಶಂಕಿಸಲಾಗಿದೆ.
ಇನ್ನು, ಕಾರ್ಯಾಚರಣೆ ವೀಕ್ಷಿಸಲು ತುಂಗಾ ನದಿ ಸೇತುವೆ ಮೇಲೆ ದೊಡ್ಡ ಸಂಖ್ಯೆಯಲ್ಲಿ ಜನರು ನಿಂತಿದ್ದಾರೆ. ಇದರಿಂದಾಗಿ ಹಳೆ ಮತ್ತು ಹೊಸ ಸೇತುವೆ ಮೇಲೆ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಟ್ರಾಫಿಕ್ ಪೊಲೀಸರು ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಹರಸಾಹಸ ಪಡುತ್ತಿದ್ದಾರೆ.